ಕೊಡಗು: ಆಸ್ತಿಗಾಗಿ ಚಿಕ್ಕಪ್ಪನ ಮಗನನ್ನೇ ಗುಂಡು ಹೊಡೆದು ಕೊಂದಿರುವ ಘಟನೆ ಕೊಡಗು ಜಿಲ್ಲೆಯ ಕೊಡಗರಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಲ್ಲೂರ ಅಂದಗೋವೆ ಗ್ರಾಮದಲ್ಲಿ ನಡೆದಿದೆ. ಧರ್ಮಪ್ಪ (53) ಎಂಬುವವರು ಕೊಲೆಯಾದ ವ್ಯಕ್ತಿಯಾಗಿದ್ದಾರೆ.
ಗುಂಡು ಹಾರಿಸಿದ 38 ವರ್ಷದ ಶಿವ ಕುಮಾರ್ನನ್ನು ಪೊಲೀಸರು ಬಂಧಿಸಿದ್ದಾರೆ. ಐದು ಎಕರೆ ತೋಟದ ಹಂಚಿಕೆಯ ಕುರಿತು ವಿವಾದ ವಾಗಿದ್ದು ಅದನ್ನು ಕುಟುಂಬಸ್ಥರ ಸಮ್ಮುಖದಲ್ಲಿ ಬಗೆಹರಿಸಲಾಗಿತ್ತು. ಆದರೆ ಶಿವಕುಮಾರ್ ಬೆಳಗ್ಗೆ ತೋಟಕ್ಕೆ ಹೋಗುತ್ತಿದ್ದಾಗ ಗುಂಡು ಹೊಡೆದು ಕೊಂಡಿದ್ದಾನೆ ಎಂದು ಹೇಳಲಾಗಿದ್ದು ಶಿವ ಕುಮಾರ್ನನ್ನು ಸುಂಟಿಕೊಪ್ಪ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.