ಸುಳ್ಯ: ಸಾರ್ವಜನಿಕ ಶೈಕ್ಷಣಿಕ ಸಂಸ್ಥೆಗಳಲ್ಲಿ ವಿದ್ಯಾರ್ಥಿನಿಯರು ಹಿಜಾಬ್ ಧರಿಸುವುದನ್ನು ನಿಷೇಧ ಮಾಡಿದ ಸರಕಾರದ ಕ್ರಮವನ್ನು ಎತ್ತಿ ಹಿಡಿದ ಹೈಕೋರ್ಟ್ ತೀರ್ಪುನ್ನು ನೀಡಿದೆ. ಸದ್ಯ ಎಲ್ಲರೂ ನ್ಯಾಯಾಲಯದ ಆದೇಶವನ್ನು ಪಾಲಿಸಬೇಕಿದೆ. ಏನಾದರೂ ಅಸಮಾಧಾನವಿದ್ದರೆ ಸುಪ್ರೀಂ ಕೋರ್ಟ್ ಗೆ ಹಾಕುವ ಅವಕಾಶ ಅರ್ಜಿದಾರರಿಗಿದೆ. ಇಷ್ಟೆಲ್ಲ ಇರುವ ಹೊರತಾಗಿಯೂ ಸುಳ್ಯ ತಾಲೂಕಿನ ವ್ಯಕ್ತಿಯೊಬ್ಬ ಜಾಲತಾಣದಲ್ಲಿ ನ್ಯಾಯಾಲಯದ ಆದೇಶವನ್ನೇ ಟೀಕಿಸಿದ ವಿಚಾರ ಇದೀಗ ಎಲ್ಲ ಕಡೆ ವೈರಲ್ ಆಗುತ್ತಿದೆ.
ಅಬ್ದುಲ್ ಮುತಾಲಿಬ್ ಎಂಬ ಪೇಸ್ ಬುಕ್ ಬಳಕೆದಾರನೋರ್ವ ತೀರ್ಪು ವಿರೋದಿಸಿ ಕಾಮೆಂಟ್ ಹಾಕಿದ್ದು ಇದರಲ್ಲಿ ಆರ್ ಎಸ್ಎಸ್ ಅನ್ನು ತುಚ್ಛವಾಗಿ ನಿಂದಿಸಿದ್ದಾನೆ. ಕೇಸರಿ ಶಾಲಿನ ಕುರಿತಾಗಿಯೂ ಪ್ರಸ್ತಾಪವೆತ್ತಿದ್ದು, ಈ ಪೋಸ್ಟ್ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಸುಳ್ಯ ದಂತಹ ಕೋಮು ದ್ವೇಷ ಸೂಕ್ಷ್ಮ ಪ್ರದೇಶಗಳಲ್ಲಿ ಇಂತಹ ಸಂದರ್ಭದಲ್ಲಿ ಶಾಂತಿಕದಡುವ ಪ್ರಯತ್ನವನ್ನು ಮಾಡುತ್ತಿರುವ ವ್ಯಕ್ತಿಗಳನ್ನು ಪೊಲೀಸ್ ಇಲಾಖೆ ಮಟ್ಟ ಹಾಕುವುದೆ ಕಾದು ನೋಡಬೇಕಿದೆ.