ಚಿಕ್ಕಮಗಳೂರು: ಆನೆ ದಾಳಿಯಿಂದ ರೈತರು ಕಂಗಾಲಾಗಿದ್ದಾರೆ. ಕೈಗೆ ಬಂದಿದ್ದ ಬೆಳೆ ಮಣ್ಣುಪಾಲಾಗಿದೆ. ಇನ್ನುಳಿದಿದ್ದನ್ನು ಕಾಪಾಡೋದೆ ದೊಡ್ಡ ತಲೆನೋವಾಗಿದೆ. ಬೆಂಕಿ ಹಾಕಿದ್ರೂ ನೋ ಯೂಸ್.. ಅರಣ್ಯ ಅಧಿಕಾರಿಗಳಿಗೆ ತಿಳಿಸಿದ್ರು ಡೋಂಟ್ ಕೇರ್. ಹೀಗಾಗಿ ಆ ಗ್ಯಾಂಗ್ ನ ಅಟ್ಯಾಕ್ ತಡೆಯುವುದಕ್ಕೆ ಈಗ ರೈತರೇ ಮಾಸ್ಟರ್ ಪ್ಲ್ಯಾನ್ ಮಾಡಿದ್ದಾರೆ.
ಆನೆಗಳ ದಾಳಿಯಿಂದ ತಮ್ಮ ಬೆಳೆಗಳನ್ನು ಕಾಪಾಡಿಕೊಳ್ಳಲು ರೈತರು ಗಿಡಗಳಿಗೆ ಮೈಕ್ ಸೆಟ್ಗಳನ್ನು ಅಳವಡಿಸಿದ್ದಾರೆ. ಹಾಗೂ ಅಲ್ಲೊಂದು ಇಲ್ಲೊಂದು ಡಿಜೆ ಸಿಸ್ಟಮ್ ಇಟ್ಟಿದ್ದಾರೆ. ಆನೆಗಳ ಗ್ಯಾಂಗ್ ದಾಳಿ ಮಾಡುವುದನ್ನು ತಪ್ಪಿಸುವುದಕ್ಕೆ ಮಾಸ್ಟರ್ ಪ್ಲ್ಯಾನ್ ಮಾಡಿದ್ದಾರೆ. ಚಿಕ್ಕಮಗಳೂರು ತಾಲೂಕಿನ ಬೀಕನಹಳ್ಳಿ, ಹಂಪಾಪುರದಲ್ಲಿ ಅನ್ನದಾತರು ಈಗ ಹೊಲ, ಗದ್ದೆ, ತೋಟಗಳಲ್ಲಿ ಮೈಕ್ ಸೆಟ್, ಡಿಜೆ, ಸಿಸ್ಟಮ್ ಇಟ್ಟು ಆನೆ ಓಡಿಸೋಕೆ ಮುಂದಾಗಿದ್ದಾರೆ. ಈ ಮೈಕ್ ನಲ್ಲಿ ಪಟಾಕಿ ಸಿಡಿಯುವ ಸೌಂಡ್, ಹುಲಿ, ಸಿಂಹ ಗರ್ಜಿಸುವ ಧ್ವನಿ, ಮನುಷ್ಯ ಕೂಗುವ ಹಾಗೆ ನಿರಂತರ ಸೌಂಡ್ ಬರುತ್ತಿರುತ್ತೆ. ಈ ರೀತಿ ಮಾಡೋದ್ರಿಂದ ಕಾಡಾನೆಗಳ ಹಾವಳಿ ತಪ್ಪುತ್ತೆ ಅನ್ನೋದು ರೈತರ ನಂಬಿಕೆ. ಪ್ರಸ್ತುತ ಆನೆ ಹಾವಳಿ ತಕ್ಕ ಮಟ್ಟಿಗೆ ಸುಧಾರಿಸಿದೆ. ಆದ್ರೆ, ಮುಂದೇನೋ ಗೊತ್ತಿಲ್ಲ ಅಂತಾರೆ ಅನ್ನದಾತರು.