ಪುತ್ತೂರು : ದಾದಿಯೊಬ್ಬಳ ನಿರ್ಲಕ್ಷ್ಯಕ್ಕೆ ನವಜಾತ ಶಿಶು ಸಾವನಪ್ಪಿದ ಹೃದಯವಿದ್ರಾವಕ ಘಟನೆ ಇಲ್ಲಿನ ಚೇತನಾ ಆಸ್ಪತ್ರೆಯಲ್ಲಿ ನಡೆದಿದೆ. ಆಸ್ಪತ್ರೆಯ ಸಿಬ್ಬಂದಿ ವಿರುದ್ಧ ಇದೀಗ ಭಾರಿ ಆಕ್ರೋಶ ವ್ಯಕ್ತವಾಗಿದ್ದು ಜಾಲತಾಣಗಳಲ್ಲಿ ಟೀಕೆ ವ್ಯಕ್ತವಾಗುತ್ತಿದೆ.
ಅನಾರೋಗ್ಯದ ಹಿನ್ನೆಲೆಯಲ್ಲಿನ ಗಣೇಶ್ ಮತ್ತು ಚೈತ್ರ ದಂಪತಿಗಳ ನವಜಾತ ಶಿಶುವನ್ನು ಚೇತನಾ ಆಸ್ಪತ್ರೆಗೆ ದಾಖಲಾಗಿಸಲಾಗಿತ್ತು. ಕಳೆದ ಭಾನುವಾರ ಡಿಸ್ಚಾರ್ಜ್ ಮಾಡುವುದು ಬೇಡ ಮಗು ಆಸ್ಪತ್ರೆಯಲ್ಲಿ ಇದ್ದು ಇನ್ನೊಂದೆರಡು ದಿನ ಆರಾಮ ಮಾಡಿಕೊಳ್ಳಲಿ ಎಂದು ಮನೆಯವರು ಮಗುವಿನ ಅಮ್ಮನ ಸಮೇತ ಆಸ್ಪತ್ರೆಯಲ್ಲಿ ಉಳಿದುಕೊಂಡಿದ್ದರು.
ಶನಿವಾರ ಮಧ್ಯಾಹ್ನದ ಹೊತ್ತಿಗೆ ಆಸ್ಪತ್ರೆಯ ನರ್ಸ್ ಚೇತನಾ ಕುಮಾರಿ ಎನ್ನುವವಳು ಮಗುವಿಗೆ ಮೂರು ಡೋಸ್ ಇಂಜೆಕ್ಷನ್ ನೀಡಿದ್ದಳು. ಮಗುವಿನ ಕಫ ತೆಗೆಯಲು ನೇಬುಲೈಸರ್ ಅಳವಡಿಸಿದ್ದಾಳೆ. ಮಗು ಆಗತಾನೆ ಹಾಲು ಕುಡಿದು ಮಲಗಿದ ಮಗುವಿಗೆ ನೇಬುಲೈಸರ್ ಅಳವಡಿಸುವುದು ತಪ್ಪು ಎಂದು ತಿಳಿದಿದ್ದರೂ ನರ್ಸ್ ಬಲವಂತವಾಗಿ ಅದನ್ನು ಅಳವಡಿಸಿದ್ದಾಳೆ, ಮಗು ಉಸಿರು ಗಟ್ಟಿ ವಿಲವಿಲ ಒದ್ದಾಡಿದೆ. ಸಹಾಯಕ್ಕಾಗಿ ಕರೆದರೂ ಯಾರೂ ಬರಲಿಲ್ಲ. ಮಗುವಿನ ಚಲನವಲನ ಕಡಿಮೆಯಾಗುತ್ತಿದ್ದಂತೆ ಮಗುವನ್ನು ಎತ್ತಿಕೊಂಡು ಮನೆಯವರು ಆತಂಕದಿಂದ ಕೌಂಟರ್ ಕಡೆಗೆ ಬಂದಾಗ ಮಗು ಸಾವಿಗೀಡಾಗಿದೆ ಎಂದು ತಿಳಿಸಲಾಯಿತು. ಸದ್ಯ ಮಗುವಿನ ಮನೆಯವರು ಆಸ್ಪತ್ರೆ ಸಿಬ್ಬಂದಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಗು ಸತ್ತು ಬರೋಬ್ಬರಿ ೪ ಗಂಟೆಗೆ ನಂತರ ಆಸ್ಪತ್ರೆಯವರು ಪೊಲೀಸ್ ದೂರು ನೀಡಿದ್ದಾರೆ. ಇದೇ ವೇಳೆ ಎಡವಟ್ಟು ಮಾಡಿದ ನರ್ಸ್ ಸ್ಥಳದಿಂದ ಕಾಲ್ಕಿತ್ತಿದ್ದು ಆಕೆಯನ್ನು ಆಸ್ಪತ್ರೆಯವರೇ ಸುರಕ್ಷಿತವಾಗಿ ಬಚ್ಚಿಟ್ಟಿದ್ದಾರೆ ಎಂದು ಹೇಳಲಾಗಿದೆ.