ಮಂಗಳೂರು: ಇಲ್ಲಿನ ಹೊರವಲಯದಲ್ಲಿರುವ ತೊಕ್ಕೊಟ್ಟಿನ ಬಟ್ಟೆ ಅಂಗಡಿಯೊಂದರಿಂದ ಇಬ್ಬರು ಬುರ್ಖಾಧಾರಿ ಮಹಿಳೆಯರು ನೈಟಿಗಳನ್ನು ಕದ್ದು ಪರಾರಿಯಾದ ಘಟನೆ ನಡೆದಿದೆ.
ವಸ್ತ್ರ ಮಳಿಗೆಗೆ ಗ್ರಾಹಕರ ಸೋಗಿನಲ್ಲಿ ಬಂದ ಬುರ್ಖಾಧಾರಿ ಮಹಿಳೆಯರು ತಮ್ಮ ಕೈಚಳಕ ತೋರಿಸಿರುವುದು ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿದೆ. ಒಟ್ಟು ಏಳೆಂಟು ನೈಟಿಗಳನ್ನು ಬುರ್ಖಾದೊಳಗೆ ಇಟ್ಟು ಮೆಲ್ಲಗೆ ಓಡಿ ಹೋಗಿದ್ದಾರೆ. ಮಾಲೀಕರಿಗೆ ಅನುಮಾನ ಬಂದು ಸಿಸಿ ಕ್ಯಾಮೆರಾ ಪರಿಶೀಲಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಸದ್ಯ ಪೊಲೀಸರಿಗೆ ದೂರು ನೀಡಲಾಗಿದ್ದು ತನಿಖೆ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ.