ಸಂಪಾಜೆ: ಎಸ್ಎಸ್ಎಫ್, ಎಸ್.ವೈ.ಎಸ್ ಸಂಪಾಜೆ ಗ್ರಾಮ ಪಂಚಾಯತ್ ವತಿಯಿಂದ ಇತ್ತೀಚೆಗೆ ವೆನ್ಲಾಕ್ ಆಸ್ಪತ್ರೆ ಮಂಗಳೂರು ರವರ ಸಹಭಾಗಿತ್ವದಲ್ಲಿ ಕಲ್ಲುಗುಂಡಿ ಗ್ರಾಮ ಪಂಚಾಯತ್ ಸಭಾಭವನದಲ್ಲಿ ರಕ್ತದಾನ ಶಿಬಿರ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಿ. ಕೆ. ಹಮೀದ್ ರವರು ರಕ್ತದಾನ ಶ್ರೇಷ್ಠದಾನ. ರಕ್ತದಾನದ ಮೂಲಕ ಸೌಹಾರ್ದ ಸಮಾಜ ನಿರ್ಮಾಣವಾಗುತ್ತದೆ ಎಂದರು. ತೆಕ್ಕಿಲ್ ಪ್ರತಿಷ್ಠಾನದ ಅಧ್ಯಕ್ಷರಾದ ಟಿ.ಎಮ್. ಶಹೀದ್ ರವರು ಮಾತನಾಡಿ ವರ್ಷದಲ್ಲಿ 5 ಬಾರಿ ರಕ್ತದಾನ ಶಿಬಿರ ಮಾಡಿ ಬಡ ರೋಗಿಗಳಿಗೆ ನೇರವಾಗುವುದರ ಮೂಲಕ ಸಮಾಜಮುಖಿ ಕೆಲಸ ಆಗುತ್ತಿದೆ. ಗ್ರಾಮ ಪಂಚಾಯತ್ ಹಾಗೂ ಸಂಘಟನೆ ಮೂಲಕ ಇನ್ನಷ್ಟು ಉತ್ತಮ ಕೆಲಸ ಮೂಡಿ ಬರಲಿ ಎಂದು ಶುಭ ಹಾರೈಸಿದರು.
ಪಂಚಾಯತ್ ಉಪಾಧ್ಯಕ್ಷರಾದ ಲಿಸ್ಸಿ ಮೊನಾಲಿಸಾ, ಸದಸ್ಯರುಗಳಾದ ಎಸ್.ಕೆ.ಹನೀಫ್, ಅಬೂಸಾಲಿ ಪಿ.ಕೆ, ಸವಾದ್ ಗೂನಡ್ಕ, ಸಜ್ಜನ ಪ್ರತಿಷ್ಠಾನದ ರಹೀಮ್ ಬೀಜದಕಟ್ಟೆ, ಉನೈಸ್ ಗೂನಡ್ಕ, ಸಿದ್ದಿಕ್ ಗೂನಡ್ಕ, ಅಬ್ಬಾಸ್ ಹಾಜಿ ಸಂಟ್ಯಾರ್, ತಾಜ್ ಮಹಮ್ಮದ್ ಸಂಪಾಜೆ, ವೆನ್ಲಾಕ್ ಆಸ್ಪತ್ರೆ ಮುಖ್ಯಸ್ಥರು, ಎಸ್ ವೈಎಸ್ ನಾಯಕರಾದ ಸಿದ್ದಿಕ್ ಕಟ್ಟೆಕಾರ್, ಎಸ್ಎಸ್ಎಫ್ ಡಿವಿಷನ್ ಪ್ರಧಾನ ಕಾರ್ಯದರ್ಶಿ ಸ್ವಬಾಹ್ ಹಿಮಮಿ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.