ಬೆಂಗಳೂರು: ಕೃಷಿ ಬಳಕೆಗಾಗಿ ಮಾಡಿರುವ ಒತ್ತುವರಿಯನ್ನು ಭೂ ಕಬಳಿಕೆ ಎಂದು ಪರಿಗಣಿಸದಿರಲು ಕಾನೂನು ತಿದ್ದುಪಡಿ ತರುವುದಾಗಿ ಕಾನೂನು ಸಚಿವ ಜೆ,ಸಿ. ಮಾಧುಸ್ವಾಮಿ ಭರವಸೆ ನೀಡಿದ್ದಾರೆ. ಸಹಜವಾಗಿಯೇ ರಾಜ್ಯದ ರೈತರಿಗೆ ಇದು ಸಿಹಿ ಸುದ್ದಿಯಾಗಿದೆ.
ಇತ್ತೀಚೆಗೆ ಗದಗ ಜಿಲ್ಲೆ ಮುಂಡರಗಿ ತಾಲೂಕಿನಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಬಗರ್ ಹುಕುಂ ಒತ್ತುವರಿ ತೆರವು ಕ್ರಮದಿಂದ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ವಿಚಾರ ವಿಧಾನ ಸಭೆಯಲ್ಲಿ ತೀವ್ರ ಚರ್ಚೆಗೆ ಕಾರಣವಾಗಿತ್ತು. ಪರಿಣಾಮ ಮುಂದಿನ ದಿನಗಳಲ್ಲಿ ಕೃಷಿ ಬಳಕೆಗಾಗಿ ಮಾಡಿರುವ ಒತ್ತುವರಿಯನ್ನು ಭೂ ಕಬಳಿಕೆ ಎಂದು ಪರಿಗಣಿಸದಿರಲು ಕಾನೂನು ತಿದ್ದುಪಡಿ ತರುವುದಾಗಿ ಸಚಿವರು ತಿಳಿಸಿದ್ದಾರೆ.