ನವದೆಹಲಿ: ಏರ್ ಇಂಡಿಯಾ ಮರಳಿ ಟಾಟಾ ಗ್ರೂಪ್ಗೆ ಸೇರಿದೆ. ತಾಯಿ ಮಡಿಲನ್ನು ಸೇರಿರುವ ಏರ್ ಇಂಡಿಯಾಕ್ಕೆ ಏರ್ ಇಂಡಿಯಾ ಎಂದು ಹೆಸರು ಬರಲು ಕಾರಣವೇನು? ಹೀಗೊಂದು ಹೆಸರನ್ನು ಇಟ್ಟವರು ಯಾರು? ಅನ್ನುವ ಅನ್ನುವ ಕೌತುಕದ ಪ್ರಶ್ನೆಗೆ ಸ್ವತಃ ಟಾಟಾ ಗ್ರೂಪ್ ಹೇಳಿದ್ದು ಹೀಗೆ..
ಇಂಡಿಯನ್ ಏರ್ ಲೈನ್ಸ್, ಏರ್ ಇಂಡಿಯಾ, ಪ್ಯಾನ್-ಇಂಡಿಯನ್ ಏರ್ ಲೈನ್ಸ್ ಹಾಗೂ ಟ್ರಾನ್ಸ್-ಇಂಡಿಯನ್ ಏರ್ ಲೈನ್ಸ್ ಈ ಹೆಸರುಗಳಲ್ಲಿ ಒಂದನ್ನು ಆಯ್ಕೆ ಮಾಡಬೇಕಿತ್ತು. ಟಾಟಾ ಸಂಸ್ಥೆಯ ಮುಖ್ಯಸ್ಥರ ಸಹಜ ಪ್ರಜಾಸತ್ತಾತ್ಮಕ ಮನಸ್ಸಿಗೆ, ಬಾಂಬೆ ಹೌಸ್ನಲ್ಲಿ ಒಂದು ರೀತಿಯ ಗ್ಯಾಲಪ್ ಪೋಲ್ ಅಥವಾ ಮಾದರಿ ಅಭಿಪ್ರಾಯ ಸಮೀಕ್ಷೆಯ ಮೂಲಕ ಜನಪ್ರಿಯ ಅಭಿಪ್ರಾಯದಿಂದ ಆಯ್ಕೆಯನ್ನು ಮಾಡಲು ಅವಕಾಶ ನೀಡುವುದು ಒಳ್ಳೆಯದು ಎಂದು ಬುಲೆಟಿನ್ ತಿಳಿಸಿತು.
ಟಾಟಾ ಉದ್ಯೋಗಿಗಳ ಅಭಿಪ್ರಾಯದ ಪ್ರಾತಿನಿಧಿಕ ವಿಭಾಗಗಳ ಅಭಿಪ್ರಾಯಗಳನ್ನು ಖಚಿತಪಡಿಸಿಕೊಳ್ಳಲು ಮತದಾನದ ಪತ್ರಗಳನ್ನು ವಿತರಿಸಲಾಯಿತು. ಮೊದಲ ಮತ್ತು ಎರಡನೆಯ ಆದ್ಯತೆಗಳನ್ನು ಸೂಚಿಸಲು ವಿನಂತಿಸಲಾಯಿತು. ಮೊದಲ ಎಣಿಕೆಯಲ್ಲಿ ಏರ್-ಇಂಡಿಯಾಗೆ ೬೪, ಇಂಡಿಯನ್ ಏರ್ ಲೈನ್ಸ್ಗೆ ೫೧, ಟ್ರಾನ್ಸ್ ಇಂಡಿಯನ್ ಏರ್ ಲೈನ್ಸ್ಗೆ ೨೮ ಮತ್ತು ಪ್ಯಾನ್-ಇಂಡಿಯನ್ ಏರ್ ಲೈನ್ಸ್ಗೆ ೧೯ ಮತಗಳು ಬಿದ್ದವು. ಕಡಿಮೆ ಒಲವು ಹೊಂದಿರುವ ಹೆಸರುಗಳನ್ನು ತೆಗೆದುಹಾಕಿದಾಗ, ಅಂತಿಮ ಎಣಿಕೆಯು ಏರ್ ಇಂಡಿಯಾಕ್ಕೆ ೭೨ ಮತ್ತು ಇಂಡಿಯನ್ ಏರ್ ಲೈನ್ಸ್ ಗೆ ೫೮ ಮತಗಳನ್ನು ಬಂದವು. ಹೀಗಾಗಿ, ಹೊಸ ಕಂಪನಿಯ ಹೆಸರು ಏರ್ ಇಂಡಿಯಾ ಎಂದಾಯಿತು ಎಂದು ತಿಳಿಸಲಾಗಿದೆ.