ಉಪ್ಪಿನಂಗಡಿ: 2 ತಿಂಗಳ ಹಿಂದೆ ಮೀನು ವ್ಯಾಪಾರಿಗಳಿಗೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ 13 ಮಂದಿ ಆರೋಪಿಗಳ ಪೈಕಿ ಈಗಾಗಲೇ ಬಂಧಿತ 6 ಮಂದಿಗೆ ಜಾಮೀನು ಮಂಜೂರುಗೊಂಡಿದ್ದು, ಇದೀಗ ಉಳಿದ 7 ಮಂದಿ ಆರೋಪಿಗಳಿಗೆ ಪುತ್ತೂರು ೫ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಶರತ್ತು ಬದ್ದ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
೨೦೨೧ನೇ ಡಿಸೆಂಬರ್ ತಿಂಗಳಲ್ಲಿ ಉಪ್ಪಿನಂಗಡಿ ಹಳೆಗೇಟ್ ನ ಸುಬ್ರಹ್ಮಣ್ಯ ಕ್ರಾಸ್ನಲ್ಲಿ ಮೀನು ವ್ಯಾಪಾರಿಗಳಾದ ಕಜೆಕ್ಕಾರಿನ ಮೋಹನ್ದಾಸ್ ಮತ್ತು ಅಶೋಕ್ ಮತ್ತು ಗ್ರಾಹಕರೊಬ್ಬರಿಗೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು 13 ಮಂದಿ ವಿರುದ್ಧ ಪ್ರಕರಣ ದಾಖಲಿಸಿ ೬ ಮಂದಿಯನ್ನು ಬಂಧಿಸಿದ್ದರು. ಬಂಧಿತ ೬ ಮಂದಿಗೂ ನ್ಯಾಯಾಲಯದಲ್ಲಿ ಜಾಮೀನು ಮಂಜೂರುಗೊಂಡಿತ್ತು.