ನವದೆಹಲಿ: ಹನಿ ಹನಿ ಕೂಡಿದರೆ ಹಳ್ಳ ಎನ್ನುವ ಮಾತಿದೆ. ಇಲ್ಲೊಂದು ಘಟನೆ ಅದನ್ನೇ ಮತ್ತೊಮ್ಮೆ ಸಾಬೀತುಪಡಿಸಿದೆ. ಪುಟ್ಟ ಅಂಗಡಿಯ ಮಾಲೀಕರೊಬ್ಬರು ತನ್ನ ದುಡಿಮೆಯ ಒಂದೊಂದು ರೂಪಾಯಿ ಹಣವನ್ನೂ ಕೂಡಿಸಿಟ್ಟು ಸ್ಕೂಟರ್ ಖರೀದಿಸಿದ್ದಾರೆ. ಬ್ರಾಂಡ್ ಮೊಬಿಲಿಟಿ ಸ್ಕೂಟರ್ ಅನ್ನು ಅವರು ಖರೀದಿಸಿರುವುದು ಎಲ್ಲವೂ ನಾಣ್ಯಗಳನ್ನೇ ನೀಡಿ ಆಗಿದೆ ಅನ್ನುವುದು ವಿಶೇಷ.
ಹೌದು, ಬುಟ್ಟಿಯಲ್ಲಿ ಚಿಲ್ಲರೆಯನ್ನು ತೆಗೆದುಕೊಂಡು ಹೋಗಿ ಶೋರೂಮ್ ಗೆ ನೀಡಿ ಗಾಡಿಯನ್ನು ಖರೀದಿಸಿದ್ದಾರೆ. ಇದರ ಫೋಟೋ ಹಾಗೂ ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಘಟನೆ ಅಸ್ಸಾಂನಲ್ಲಿ ನಡೆದಿದೆ. ಈ ಕುರಿತ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕನಸನ್ನು ನನಸಾಗಿಸಲು ಸಾಕಷ್ಟು ಹಣ ಬೇಕಾಗುತ್ತದೆ. ಅದು ಸಣ್ಣ ಸಣ್ಣ ಉಳಿತಾಯದಿಂದಲೂ ಸಾಧ್ಯವಾಗುತ್ತದೆ ಎಂದು ಕ್ಯಾಪ್ಷನ್ ನೀಡಲಾಗಿದೆ. ಯುಟ್ಯೂಬ್ ನಲ್ಲೂ ಇದರ ವಿಡಿಯೋವನ್ನು ಅವರು ಹಂಚಿಕೊಂಡಿದ್ದು, ನಾಣ್ಯಗಳನ್ನು ಚೀಲದಲ್ಲಿ ತುಂಬಿಸಿಕೊಂಡು ಬಂದು ಅದನ್ನು ಬುಟ್ಟಿಗೆ ಹಾಕಿ ನಂತರ ಅದನ್ನು ಎಣಿಸುವುದನ್ನು ಕಾಣಬಹುದಾಗಿದೆ.