ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಒಟ್ಟು 10 ಕಂತುಗಳು ಬಿಡುಗಡೆಯಾಗಿದೆ. ಇನ್ನು ಕೆಲವೇ ದಿನಗಳಲ್ಲಿ 11ನೇ ಕಂತನ್ನು ಪಿಎಂ ಮೋದಿ ಬಿಡುಗಡೆ ಮಾಡಲಿದ್ದಾರೆ. ಆದರೆ 11ನೇ ಕಂತಿನ ಹಣ ಪಡೆಯಲು ಅರ್ಹ ರೈತರು ಕಡ್ಡಾಯವಾಗಿ ಇ ಕೆವೈಸಿ ಮಾಡಿಕೊಳ್ಳಬೇಕಾಗಿದೆ. ಇ ಕೆವೈಸಿ ಮಾಡಿಸಿಕೊಳ್ಳುವುದು ಹೇಗೆ ಎಂಬ ಮಾಹಿತಿ ಇಲ್ಲಿದೆ ನೋಡಿ..
1. ಮೊದಲಿಗೆ ಪಿಎಂ ಕಿಸಾನ್ ವೆಬ್ಸೈಟ್ https://pmkisan.gov.in/ ಗೆ ಭೇಟಿ ಕೊಡಿ.
2. ಹೋಂಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ಬಲಭಾಗದಲ್ಲಿ Farmers Corner ಎಂಬ ಒಂದು ವಿಭಾಗ ಕಾಣಿಸಿಕೊಳ್ಳುತ್ತದೆ.
3. ಅದರ ಕೆಳಗೆ ಇ-ಕೆವೈಸಿ ಎಂದು ಬರೆದುಕೊಂಡಿರುವ ಬಾಕ್ಸ್ ಇದೆ. ಅದರ ಮೇಲೆ ಕ್ಲಿಕ್ ಮಾಡಿ.
4. ಆಗ ಒಂದು ಹೊಸದಾದ ಪೇಜ್ ಕಾಣಿಸಿಕೊಳ್ಳುತ್ತದೆ. ಅದರಲ್ಲಿ ಆಧಾರ್ ನಂಬರ್ ತುಂಬಬೇಕು. ಆಗ ಕ್ಯಾಪ್ಚಾ ಕೋಡ್ ಕಾಣಿಸಿಕೊಳ್ಳುತ್ತದೆ. ನೀವು ಆ ಅಕ್ಷರಗಳನ್ನು ಜಾಗರೂಕತೆಯಿಂದ ತುಂಬಿ ವೆರಿಫೈ ಮಾಡಬೇಕು.
5. ನಂತರ ನಿಮ್ಮ ಆಧಾರ್ಕಾರ್ಡ್ಗೆ ಲಿಂಕ್ ಆಗಿರುವ ಮೊಬೈಲ್ ನಂಬರ್ನ್ನು ತುಂಬಬೇಕು ಮತ್ತು ಒಟಿಪಿ ಬಟನ್ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮ್ಮ ಅದೇ ನಂಬರ್ಗೆ ಒಂದು ಒಟಿಪಿ ಬರುತ್ತದೆ.
6. ದೃಢೀಕರಣಕ್ಕಾಗಿ ಅದೇ ಒಟಿಪಿಯನ್ನು ನೀವು ತುಂಬಿ. ಸಬ್ಮಿಟ್ ಮಾಡಿದರೆ ನಿಮ್ಮ ಪಿಎಂ ಕಿಸಾನ್ ಕೆವೈಸಿ ಯಶಸ್ವಿಯಾಗಿ ಅಪ್ಡೇಟ್ ಆಗುತ್ತದೆ.