ಸುಳ್ಯ: ಒಂದು ಕಡೆ ಅಡಿಕೆಗೆ ದರ ದಿನದಿಂದ ದಿನಕ್ಕೆ ಏರುತ್ತಿದ್ದರೆ ಅಡಿಕೆ ಕದಿಯುವ ಕಳ್ಳರ ಸಂಖ್ಯೆಯು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಹೌದು, ಸುಳ್ಯದ ಕೊಡಿಯಾಲ ಬೈಲು ಸಮೀಪದ ಪದ್ಮಾವತಿ ಎಂಬವರ ಮನೆಯಲ್ಲಿ ನಿನ್ನೆ ರಾತ್ರಿ ಸುಮಾರು 80 ಕೆಜಿ ಯಷ್ಟು ಅಡಿಕೆ ಕಳವಾಗಿರುವ ಘಟನೆ ವರದಿಯಾಗಿದೆ.
ಮನೆಯ ಅಂಗಳದಲ್ಲಿ ಒಣಗಲು ಹಾಕಿದ್ದ ಅಡಿಕೆಯನ್ನು ಸಂಜೆ ಸಮಯದಲ್ಲಿ ಟಾರ್ಪಲ್ ನಿಂದ ಮುಚ್ಚಲಾಗುತ್ತಿದ್ದು ಇಂದು ಬೆಳಿಗ್ಗೆ ಏಳು ಗಂಟೆಯ ಸಮಯದಲ್ಲಿ ಮನೆಯ ಯಜಮಾನಿ ಪದ್ಮಾವತಿ ರವರು ಪ್ಲಾಸ್ಟಿಕ್ ಟರ್ಪಲ್ ತೆರವುಗೊಳಿಸುವ ಸಂದರ್ಭ ಅಡಿಕೆ ಕಳುವಾಗಿರುವ ಘಟನೆ ತಿಳಿದು ಬಂದಿದೆ. ಕಳವಾಗಿರುವ ಅಡಿಕೆಗೆ ಸುಮಾರು 40 ಸಾವಿರ ರೂಪಾಯಿ ಮೌಲ್ಯ ವಿರಬಹುದೆಂದು ಅಂದಾಜಿಸಲಾಗಿದೆ. ಸುಳ್ಯ ಪೊಲೀಸರಿಗೆ ಮಾಹಿತಿ ತಿಳಿಸಿದ್ದು ಸ್ಥಳ ಪರಿಶೀಲನೆ ನಡೆಸಿರುತ್ತಾರೆ ಎಂದು ತಿಳಿದುಬಂದಿದೆ.