ಕುಶಿನಗರ: ಉತ್ತರ ಪ್ರದೇಶದ ಕುಶಿನಗರದಲ್ಲಿ ಬುಧವಾರ ತಡರಾತ್ರಿ ಮದುವೆ ಸಮಾರಂಭವೊAದರಲ್ಲಿ ದುರ್ಘಟನೆ ಸಂಭವಿಸಿದೆ. ಹಲ್ದಿ ಸಂಪ್ರದಾಯ ನಡೆಯುವ ವೇಳೆ ೧೩ ಮಹಿಳೆಯರು ಬಾವಿಯಲ್ಲಿ ಮುಳುಗಿ ಸಾವಿಗೀಡಾಗಿದ್ದಾರೆ.
ಬಾವಿಯ ಮೇಲಿನ ಕಬ್ಬಿಣದ ಹೊದಿಕೆಯ ಮೇಲೆ ಮಹಿಳೆಯರು ಕುಳಿತಿದ್ದರು. ಈ ವೇಳೆ ಅದು ಕುಸಿದಿದ್ದು ಮಹಿಳೆಯರು ಬಾವಿಗೆ ಬಿದ್ದಿದ್ದಾರೆ. ಕುಶಿನಗರದ ನೆಬುವಾ ನೌರಂಗಿಯಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬುಧವಾರ ರಾತ್ರಿ ೮.೩೦ರಲ್ಲಿ ಈ ದುರ್ಘಟನೆ ಸಂಭವಿಸಿದೆ. ಬಾವಿಯಲ್ಲಿ ಬಿದ್ದವರನ್ನು ರಕ್ಷಿಸಲು ಮಧ್ಯರಾತ್ರಿಯ ವರೆಗೆ ಕಾರ್ಯಾಚರಣೆ ನಡೆಯಿತು. ಸ್ಥಳೀಯರು, ಪೊಲೀಸರು ನಡೆಸಿದ ರಕ್ಷಣಾ ಕಾರ್ಯಾಚರಣೆಯಲ್ಲಿ ೧೫ ಮಹಿಳೆಯರನ್ನು ರಕ್ಷಿಸಲಾಯಿತಾದರೂ, ೧೩ ಮಹಿಳೆಯರು ಘಟನೆಯಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ.