ಬೆಂಗಳೂರು: 100ಕ್ಕೂ ಅಧಿಕ ರಾಷ್ಟ್ರಗಳಲ್ಲಿ ಕಾರ್ಯಾಚರಿಸುತ್ತಿರುವ ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸಪ್ ಬಳಕೆದಾರರಿಗೆ ಹೊಸ ಫೀಚರ್ ಪರಿಚಯಿಸಲು ಮುಂದಾಗಿದೆ.
ಹೊಸ ಅಪ್ ಡೇಟ್ ನಲ್ಲಿ ಸ್ಟೇಟಸ್ ಪೋಸ್ಟ್ ಮತ್ತು ವಾಟ್ಸಪ್ ಮೂಲಕ ಕಳುಹಿಸಲಾಗುವ ಫೋಟೊ, ವಿಡಿಯೊಗಳನ್ನು ಇನ್ನಷ್ಟು ಹೆಚ್ಚು ಕ್ರಿಯಾಶೀಲವಾಗಿ ಎಡಿಟ್ ಮಾಡಲು ಅನುಕೂಲವಾಗುವ ಟೂಲ್ ಗಳನ್ನು ಒದಗಿಸಲಾಗುತ್ತದೆ. ವಾಟ್ಸಪ್ ಮೂಲಕ ಕಳುಹಿಸಲಾಗುವ ಫೋಟೊ, ವಿಡಿಯೊದಲ್ಲಿ ಆಕರ್ಷಕ ಡ್ರಾಯಿಂಗ್, ಬರಹ, ಎಮೋಜಿಗಳನ್ನು ಬಳಸಿ ಇನ್ನಷ್ಟು ಚಂದಗಾಣಿಸಲು ಹಲವರು ಥರ್ಡ್ ಪಾರ್ಟಿ ಅಪ್ಲಿಕೇಶನ್ ಬಳಸುತ್ತಿದ್ದಾರೆ. ಅದರ ಬದಲು, ವಾಟ್ಸಪ್ ಅಪ್ಲಿಕೇಶನ್ ನಲ್ಲಿಯೇ ಹೊಸ ಆಯ್ಕೆ ಪರಿಚಯಿಸಲಿದೆ.