ಗುತ್ತಿಗಾರು: ನಡೆಯಲಾಗದೆ ಮಾತನಾಡಲಾಗದೆ ಜೀವನದಲ್ಲಿ ನೊಂದು ಬೆಂದು ಅಸಹಾಯಕ ಪರಿಸ್ಥಿತಿಯಲ್ಲಿದ್ದ ವ್ಯಕ್ತಿಗೆ ಸಹಾಯ ಮಾಡಿ ನೆರವಾದ ಘಟನೆ ಸುಬ್ರಹ್ಮಣ್ಯದಿಂದ ವರದಿಯಾಗಿದೆ.
ಸುಬ್ರಹ್ಮಣ್ಯ ಬೀದಿಯಲ್ಲಿ ಅಸಹಾಯಕ ಸ್ಥಿತಿಯಲ್ಲಿ ವ್ಯಕ್ತಿಯೊಬ್ಬ ಪತ್ತೆಯಾಗಿದ್ದು ಆತನಬಳಿ ಹೋಗಿ ವಿಚಾರಿಸಿದಾಗ ಮಾತು ಬರುವುದಿಲ್ಲ, ನಡೆದಾಡಲು ಆಗಿರಲಿಲ್ಲ, ಪೆನ್ನಿ ನಲ್ಲಿ ಹೆಸರು ಬರೆದು ತೋರಿಸುವ ವ್ಯಕ್ತಿಯಾಗಿದ್ದು ಹೆಸರು ಪ್ರವೀಣ್, ಕನಕಪುರದಲ್ಲಿ ಆಟೋ ಚಾಲಕನಾಗಿ ದುಡಿಯುತಿದ್ದರೆನ್ನಲಾಗಿದೆ. ಹೆಂಡತಿ ಎರಡು ಮಕ್ಕಳು, ಜೊತೆ ವಾಸವಾಗಿದ್ದು ಐದು ದಿನ ಮೊದಲು ಅತ್ತೆ ಮನೆಯವರು ಮನೆಯಿಂದ ಹೊರಗೆ ಹಾಕಿದ್ದಾರೆ, ಅಲ್ಲಿಂದ ಬಸ್ ಹತ್ತಿ ಕುಕ್ಕೆ ಸುಬ್ರಹ್ಮಣ್ಯಕ್ಕೆ ಬಂದಿದ್ದಾಗಿ ತಿಳಿಸಿದ್ದಾರೆ.
ಅಸಹಾಯಕ ಸ್ಥಿತಿಯಲ್ಲಿದ್ದ ಪ್ರವೀಣ್ ಅವರನ್ನು ರಕ್ಷಣೆ ಮಾಡಿ ಜೋಸೆಫ್ ಕ್ರಸ್ಟ ಅವರು ನಡೆಸುವ ಮಂಜೇಶ್ವರದ ಸ್ನೇಹಲಯ ಮಾನಸಿಕ ಪುನರ್ವಸತಿ ಕೇಂದ್ರಕ್ಕೆ ಸೇರಿಸಲಾಗಿದೆ. ಸಮಾಜಸೇವಕ ರವಿಕಕ್ಕೇಪದವು, ಶಿವ ಭಟ್,ಮಣಿಕಂಠ, ಗೋಪಾಲ ಎಣ್ಣೆಮಜಲು,ಕಾರ್ತಿಕ್ ದೇವರಗದ್ದೆ ,ಲತೇಶ್, ಅಜಿತ್ ಕೋಡಿಕಜೆ,ರಕ್ಷಣೆ ಕಾರ್ಯವನ್ನು ಮಾಡಿದರು. ಈ ಸಂದರ್ಭದಲ್ಲಿ ರಕ್ಷಣೆಗೆ ವಾಹನಕ್ಕೆ ಬಾಡಿಗೆ ರೂಪದಲ್ಲಿ 1500ರೂ ಗಳನ್ನು ವೇಲೇರಿಯನ್ ಡಿಸೋಜ ಎಸ್. ಎಸ್. ಬೇಕರಿ ಸುಬ್ರಹ್ಮಣ್ಯ ನೀಡಿ ಸಹಕರಿಸಿದ್ದಾರೆ.