ಸಂಪಾಜೆ: ಗ್ರಾಮ ಪಂಚಾಯತ್ ಸಂಪಾಜೆ ನೇತೃತ್ವದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ ಜಿ.ಕೆ. ಹಮೀದ್ ನೇತೃತ್ವದಲ್ಲಿ ಪರಿಶಿಷ್ಟ ಜಾತಿ ಹಾಗೂ ಪಂಗಡದ 62 ಫಲಾನುಭವಿಗಳಿಗೆ 500 ಲೀಟರ್ ಸಾಮರ್ಥ್ಯದ ಸಿಂಟೆಕ್ಸ್ ಡ್ರಮ್ ವಿತರಣೆ ಮಾಡಲಾಯಿತು.
ಸಂಪಾಜೆ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಸೋಮಶೇಖರ್ ಕೊಇಂಗಾಜೆ ಡ್ರಮ್ ವಿತರಿಸಿದರು. ಮಹಾವಿಷ್ಣುಮೂರ್ತಿ ಆಡಳಿತ ಮಂಡಳಿ ಅಧ್ಯಕ್ಷ ಶ್ರೀಧರ್ ಮಾದೇಪಾಲ್, ಕಾರ್ಯದರ್ಶಿ ಮಂಜುನಾಥ್, ಸಂಪಾಜೆ ಬದ್ರ್ ಜುಮಾ ಮಸೀದಿ ಅಧ್ಯಕ್ಷರಾದ ತಾಜ್ ಮಹಮ್ಮದ್, ಕೋಶಾಧಿಕಾರಿ ಅಬ್ದುಲ್ ರಹಿಮಾನ್, ರಿಯಾಜ್. ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಲಿಸ್ಸಿ ಮೊನಾಲಿಸಾ, ಸದಸ್ಯರುಗಳಾದ ಜಗದೀಶ್ ರೈ, ಸುಂದರಿ ಮುಂಡಡ್ಕ, ಸುಮತಿ ಶಕ್ತಿವೇಲು ಮತ್ತಿತರರು ಹಾಜರಿದ್ದರು.