ಬೆಂಗಳೂರು: ಅಭಿಮಾನಿಗಳ ಕಣ್ಮಣಿಯಾಗಿದ್ದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಗಲಿ ಇಂದಿಗೆ ಭರ್ತಿ ಮೂರು ತಿಂಗಳು ಕಳೆದಿವೆ. ಈ ಹಿನ್ನೆಲೆಯಲ್ಲಿ ಇಂದು ಪುನೀತ್ ರಾಜ್ ಕುಮಾರ್ ಪತ್ನಿ ಅಶ್ವಿನಿ, ಅಣ್ಣ ರಾಘವೇಂದ್ರ ರಾಜ್ ಕುಮಾರ್ ಸೇರಿದಂತೆ ಕುಟುಂಬ ವರ್ಗದವರು ಸಮಾಧಿಗೆ ತೆರಳಿ ಪೂಜೆ ಸಲ್ಲಿಸಿದರು. ಈ ವೇಳೆ ಅಭಿಮಾನಿಗಳಿಗೆ ಸಸಿ ನೀಡುವ ಮೂಲಕ ಕುಟುಂಬ ವರ್ಗ ಪುನೀತ್ ನೆನಪನ್ನು ಹೆಚ್ಚು ಸ್ಮರಣೀಯವಾಗಿಸಿದರು. ಗಿಡಗಳಲ್ಲಿ ಆತ್ಮ ವಾಸಿಸುತ್ತದೆ ಅನ್ನುವ ಮಾತಿದೆ. ಈ ಕಾರಣಕ್ಕೆ ಗಿಡಗಳನ್ನು ನೀಡುತ್ತಿದ್ದೇವೆ ಎಂದು ರಾಘವೇಂದ್ರ ರಾಜ್ ಕುಮಾರ್ ತಿಳಿಸಿದರು.
- +91 73497 60202
- [email protected]
- November 23, 2024 12:25 AM