ನವದೆಹಲಿ: ಹೆಚ್ಚುತ್ತಿರುವ ಕರೋನಾ ವೈರಸ್ ಪ್ರಕರಣಗಳ ಮಧ್ಯೆ ಭಾರತ ಮತ್ತೊಮ್ಮೆ ಇಂಡಿಯನ್ ಪ್ರೀಮಿಯರ್ ಲೀಗ್ (IPL 2022) ನ ಹೊಸ ಋತುವನ್ನು ಬರ ಮಾಡಿಕೊಳ್ಳಲು ಸಿದ್ಧತೆ ನಡೆಸುತ್ತಿದೆ.
10 ತಂಡಗಳೊಂದಿಗೆ ಈ ವರ್ಷ ಏಪ್ರಿಲ್-ಮೇ ತಿಂಗಳಲ್ಲಿ ನಡೆಯಲಿರುವ ಹೊಸ ಸೀಸನ್ ಬಗ್ಗೆ ಸಾಕಷ್ಟು ಕುತೂಹಲದ ಜೊತೆಗೆ ಆತಂಕವೂ ಇದ್ದೇ ಇದೆ. ಆದರೆ ಕೂಟದ ಪ್ರಾರಂಭದ ಮೊದಲು, ದೊಡ್ಡ ಹರಾಜು ಕೂಡ ಒಂದು ಪ್ರಮುಖ ಆಕರ್ಷಣೆಯಾಗಿದೆ. ಇದರಲ್ಲಿ ಎಲ್ಲಾ 10 ಫ್ರಾಂಚೈಸಿಗಳು ತಮ್ಮ ತಂಡಗಳನ್ನು ರೆಡಿ ಮಾಡುವುದಕ್ಕೆ ಸಜ್ಜಾಗಿವೆ. ಈ ಹರಾಜು ಯಾವಾಗ ಮತ್ತು ಎಲ್ಲಿ ನಡೆಯುತ್ತದೆ ಎಂಬುದರ ಕುರಿತು ಇನ್ನೂ ಸ್ಪಷ್ಟತೆ ಇಲ್ಲ.
ಈ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಜನವರಿ ಶನಿವಾರದಂದು ಎಲ್ಲಾ ಫ್ರಾಂಚೈಸಿಗಳೊಂದಿಗೆ ಮಹತ್ವದ ಸಭೆ ನಡೆಸಲಿದೆ. ಈ ಸಭೆಯಿಂದ, ಹರಾಜಿನ ದಿನಾಂಕ ಮತ್ತು ಸ್ಥಳ ಮತ್ತು ಪಂದ್ಯಾವಳಿಯನ್ನು ಭಾರತದಲ್ಲಿ ನಡೆಸಬೇಕೆ ಅಥವಾ ಭಾರತದಿಂದ ಹೊರಗೆ ನಡೆಸಬೇಕೆ? ಎಂಬ ಬಗ್ಗೆ ಚರ್ಚೆಯಾಗುವ ಸಾಧ್ಯತೆ ಇದೆ.