ಇಸ್ಲಾಮಾಬಾದ್: ಭಾರತದ ರಫೇಲ್ ವಿಮಾನಗಳ ಖರೀದಿಗೆ ಪ್ರತಿಯಾಗಿ ಪಾಕಿಸ್ತಾನವು ತನ್ನ ಮಿತ್ರ ರಾಷ್ಟ್ರ ಚೀನಾದಿಂದ 25 ಅತ್ಯಾಧುನಿಕ ‘ಜೆ–10ಸಿ’ ಫೈಟರ್ ಜೆಟ್ ಗಳನ್ನು ಪಡೆಯಲಿದೆ ಎಂದು ಪಾಕ್ ನ ಆಂತರಿಕ ಸಚಿವ ಶೇಖ್ ರಶೀದ್ ಅಹ್ಮದ್ ಹೇಳಿದ್ದಾರೆ.
ರಾವಲ್ಪಿಂಡಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಸಚಿವರು, ಎಲ್ಲ ಹವಾಮಾನದ ಸಂದರ್ಭದಲ್ಲಿಯೂ ಕಾರ್ಯ ನಿರ್ವಹಿಸಬಲ್ಲ ಜೆ–10ಸಿ ಫೈಟರ್ ಜೆಟ್ ಗಳು ಮಾರ್ಚ್ 23ರ ಪಾಕಿಸ್ತಾನ ದಿನಾಚರಣೆ ಸಂದರ್ಭದಲ್ಲಿ ಪಾಲ್ಗೊಳ್ಳಲಿವೆ ಎಂದು ಅವರು ತಿಳಿಸಿದರು.