ನವದೆಹಲಿ: ಗಡಿ ಭದ್ರತಾ ಪಡೆ (BSF)ಯಲ್ಲಿ 2700ಕ್ಕೂ ಅಧಿಕ ಕಾನ್ಸ್ಟೇಬಲ್ ಹುದ್ದೆಗಳು ಖಾಲಿ ಇದ್ದು ಅರ್ಹರಿಂದ ಅರ್ಜಿ ಆಹ್ವಾನಿಸಿದೆ. ಬಿಎಸ್ಎಫ್ ತನ್ನ ಅಧಿಕೃತ ವೆಬ್ಸೈಟ್ https://rectt.bsf.gov.inನಲ್ಲಿ ಈ ಬಗ್ಗೆ ಅಧಿಸೂಚನೆ ಹೊರಡಿಸಿದ್ದು, ಹುದ್ದೆ ನೇಮಕಾತಿ ಪ್ರಕ್ರಿಯೆ ದೈಹಿಕ ಪ್ರಮಾಣಿತ ಪರೀಕ್ಷೆ(PST), ದೈಹಿಕ ದಕ್ಷತಾ ಪರೀಕ್ಷೆ (PET), ದಾಖಲೀಕರ, ಟ್ರೇಡ್ ಟೆಸ್ಟ್, ಲಿಖಿತ ಪರೀಕ್ಷೆ ನಂತರ ವಿವರವಾದ ವೈದ್ಯಕೀಯ ಪರೀಕ್ಷೆ (DME)ಗಳನ್ನು ಒಳಗೊಂಡಿರುತ್ತದೆ. ಒಟ್ಟು ಖಾಲಿ ಇರುವ 2188 ಹುದ್ದೆಗಳಲ್ಲಿ 2651 ಹುದ್ದೆಗಳು ಪುರುಷರಿಗಾಗಿ ಮತ್ತು 137 ಮಹಿಳೆಯರಿಗಾಗಿ ಇವೆ. 18-23ವರ್ಷದವರು ಮಾತ್ರ ಅರ್ಜಿ ಸಲ್ಲಿಸಬೇಕು.
7ನೇ ವೇತನ ಆಯೋಗದ (ಪರಿಷ್ಕೃತ ವೇತನ ರಚನೆ) ವೇತನ ಮ್ಯಾಟ್ರಿಕ್ಸ್ ಮಟ್ಟ-3ರ ವೇತನ ಸ್ಕೇಲ್ 21,700-69,100ರಡಿಯಲ್ಲಿ ಬಿಎಸ್ಎಫ್ ಕಾನ್ಸ್ಟೆಬಲ್ ಹುದ್ದೆಗಳಿಗೆ ನೇಮಕಾತಿ ಮಾಡಲಾಗುತ್ತಿದೆ. ಅಷ್ಟೇ ಅಲ್ಲ, ಕೇಂದ್ರ ಸರ್ಕಾರಿ ನೌಕರರಿಗೆ ನೀಡುವ ಎಲ್ಲ ರೀತಿಯ ಭತ್ಯೆಗಳನ್ನೂ ಕಾಲಕಾಲಕ್ಕೆ ನೀಡಲಾಗುತ್ತದೆ. ಅದರೊಂದಿಗೆ ಬಿಎಸ್ಎಫ್ ನೌಕರರಿಗೆ ನೀಡಲಾಗುವ ಪಡಿತರ ಭತ್ಯೆ, ವೈದ್ಯಕೀಯ ನೆರವು, ಉಚಿತ ವಸತಿ, ಉಚಿತ ರಜೆ ಪಾಸ್ ಇತ್ಯಾದಿಗಳೂ ಇರಲಿವೆ.
ಅರ್ಹ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಅರ್ಜಿ ನಮೂನೆಗಳು ಜನವರಿ 16ರಿಂದಲೇ https://rectt.bsf.gov.in ವೆಬ್ಸೈಟ್ನಲ್ಲಿ ಲಭ್ಯ ಇವೆ. ಅರ್ಜಿ ಸಲ್ಲಿಸಲು ಕೊನೇ ದಿನ ಮಾರ್ಚ್ 1ರ 11.59 ಆಗಿದೆ. ಅಭ್ಯರ್ಥಿಗಳು ಕಡ್ಡಾಯವಾಗಿ ಆನ್ಲೈನ್ ಮೂಲಕವೇ ಅರ್ಜಿ ಸಲ್ಲಿಸಬೇಕು. ಅದರ ಹೊರತು ಇನ್ಯಾವುದೇ ರೀತಿಯಲ್ಲಿ ಸಲ್ಲಿಸಿದರೂ ಅದನ್ನು ಸ್ವೀಕರಿಸಲಾಗುವುದಿಲ್ಲ ಎಂದು ಹೇಳಲಾಗಿದೆ. ಹಾಗೇ, ಅಭ್ಯರ್ಥಿಗಳು ಸರಿಯಾಗಿ ಗಮನ ಇಟ್ಟು, ಸರಿಯಾಗಿ ಅರ್ಜಿ ಸಲ್ಲಿಸಬೇಕು ಎಂದೂ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.