ಸುಳ್ಯ: ಪೊಲೀಸರು ಬೆತ್ತಲೆ ಮಾಡಿ ಹೊಡೆದ್ರು ಎಂದು ವಿಡಿಯೋ ಮಾಡಿದ್ದ ಬೆಳ್ಳಾರೆಯ ಯುವಕನ ಪ್ರಕರಣವೀಗ ಎಲ್ಲ ಕಡೆ ವೈರಲ್ ಆಗಿದೆ.
ಘಟನೆಯ ಸತ್ಯಾಸತ್ಯತೆಯನ್ನು ಪರಿಶೀಲಿಸಲು ಸ್ವತಃ ಬೆಳ್ಳಾರೆಗೆ ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬುಧವಾರ ಸಂಜೆ ಭೇಟಿ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಬೆಳ್ಳಾರೆ ಸಮೀಪದ ಪಾಲ್ತಾಡಿನ ಅಜಿತ್ ಎಂಬಾತ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವನ್ನು ಹರಿಯಬಿಟ್ಟಿದ್ದು ಅದರಲ್ಲಿ ತನಗೆ ಬೆಳ್ಳಾರೆ ಪೊಲೀಸರು ಬೆತ್ತಲೆ ಮಾಡಿ ಹಲ್ಲೆ ನಡೆಸಿದ್ದಾರೆ ಎಂದು ದೂರಿದ್ದ. ಆದರೆ ಯುವಕನ ಎಲ್ಲ ಆರೋಪವನ್ನು ಪೊಲೀಸರು ನಿರಾಕರಿಸಿದ್ದಾರೆ.