ನವದೆಹಲಿ: ಭಾರತದ ವಿರುದ್ಧ ಪ್ರಚಾರದಲ್ಲಿ ತೊಡಗಿದ್ದ 20 ಯೂಟ್ಯೂಬ್ ಚಾನಲ್ಗಳು ಮತ್ತು 2 ವೆಬ್ ಸೈಟ್ಗಳಿಗೆ ಕೇಂದ್ರ ಸರಕಾರ ನಿಷೇಧ ಹೇರಿದೆ. ಗುಪ್ತಚರ ಇಲಾಖೆ ಮತ್ತು ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆಗೆ ಸಿಕ್ಕಿದ ಮಾಹಿತಿ ಮೇರೆಗೆ ಈ ಆದೇಶ ಹೊರಡಿಸಲಾಗಿದೆ. ನಿಷೇಧಕ್ಕೊಳಗಾಗಿರುವ ವೆಬ್ಸೈಟ್ ಮತ್ತು ಯೂಟ್ಯೂಬ್ ಚಾನಲ್ಗಳು ಪಾಕಿಸ್ತಾನದಿಂದ ಕಾರ್ಯ ನಿರ್ವಹಿಸುತ್ತಿದ್ದವು ಅಥವಾ ಪಾಕಿಸ್ತಾನದಿಂದ ನಿಯಂತ್ರಿಸಲ್ಪಡುತ್ತಿದ್ದವು ಎಂಬ ಮಾಹಿತಿ ಲಭ್ಯವಾಗಿದೆ.
ನಿಷೇಧಗೊಂಡ ಚಾನಲ್ಗಳ ಪೈಕಿ 15 ಚಾನೆಲ್ ಗಳು ನಯಾ ಪಾಕಿಸ್ತಾನ್ ಗ್ರೂಪ್ನ ಒಡೆತನದಲ್ಲಿವೆ. ಉಳಿದವು ನೇಕೆಡ್ ಟ್ರುತ್, 48 ನ್ಯೂಸ್ ಮತ್ತು ಜುನೈದ್ ಹಲಿಮ್ ಅಫೀಶಿಯಲ್ ಮೊದಲಾದ ಚಾನಲ್ಗಳಾಗಿವೆ. ಈ ಯೂಟ್ಯೂಬ್ ಚಾನಲ್ ಗಳ ಒಟ್ಟು ಚಂದಾದಾರರು ಸುಮಾರು 35 ಲಕ್ಷ ಜನರಿದ್ದು, ಭಾರತಕ್ಕೆ ಸಂಬAಧಿಸಿದಂತೆ ಬಹಳ ಸೂಕ್ಷ್ಮ ವಿಷಯಗಳ ಬಗ್ಗೆ ಸುಳ್ಳು ಸುದ್ದಿಗಳನ್ನು ಹರಡುತ್ತಿದ್ದವು. ಈ ವಿಡಿಯೋಗಳನ್ನು 500 ಮಿಲಿಯನ್ ಗಿಂತಲೂ ಹೆಚ್ಚು ಜನ ವೀಕ್ಷಿಸಿದ್ದಾರೆ. ಈ ಯೂಟ್ಯೂಬ್ ಚಾನಲ್ ಭಾರತದ ಕಾಶ್ಮೀರ, ಭಾರತೀಯ ಸೇನೆ, ರಾಮ ಮಂದಿರ, ಜನರಲ್ ಬಿಪಿನ್ ರಾವತ್ ಮುಂತಾದ ವಿಷಯಗಳ ಬಗ್ಗೆ ಸುಳ್ಳು ಸುದ್ದಿಗಳನ್ನು ಪ್ರಸಾರ ಮಾಡುತ್ತಿದ್ದವು ಎನ್ನಲಾಗಿದೆ.