ಅರಂತೋಡು: ತಮ್ಮ ಮನೆ ಕುಟುಂಬದಲ್ಲಿ ಒಳ್ಳೆಯ ಕೆಲಸ ಮಾಡುವುದರ ಮೂಲಕ ಸಮಾಜಸೇವೆ ಆರಂಭಿಸಿ ಎಂದು ಎಲಿಮಲೆ ಸರಕಾರಿ ಪ್ರೌಢಶಾಲೆಯ ನಿವೃತ್ತ ಶಿಕ್ಷಕ ಚಂದ್ರಶೇಖರ್ ಪೇರಾಲ್ ಹೇಳಿದರು.
ಅಜ್ಜಾವರ ಚೈತನ ಸೇವಾಶ್ರಮವದಲ್ಲಿ ಇಲ್ಲಿಯ ಸ್ವಾಮೀಜಿ ಶ್ರೀ ಯೋಗೇಶ್ವರಾ ನಂದ ಸರಸ್ವತಿ ಸ್ವಾಮೀಜಿಯವರ 187ನೇ ಕೃತಿ ಒಂದೇ ಜಗದ್ಗುರು ಬಿಡುಗಡೆಗೊಳಿಸಿ ಬಳಿಕ ಆಶ್ರಮ ವತಿಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಆಧುನಿಕ ಕಾಲಘಟ್ಟದಲ್ಲಿ ಜನರು ಕೆಟ್ಟ ವಿಷಯಗಳನ್ನು ಆದಷ್ಟು ಬೇಗ ಸ್ವೀಕರಿಸುತ್ತಾರೆ ಆದರೆ ಒಳ್ಳೆಯ ವಿಷಯಗಳನ್ನು ಸ್ವೀಕರಿಸುವುದಿಲ್ಲ. ಇಂದಿನ ಯುವ ಜನಾಂಗ ಕೆಟ್ಟ ವಿಷಯಗಳ ಕಡೆ ಆಕರ್ಷಿತರಾಗದೆ ಒಳ್ಳೆಯ ಗಳನ್ನು ಸ್ವೀಕರಿಸಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕೆಂದು ಎಂದು ಹೇಳಿದರು.
ಶ್ರೀ ಯೋಗೇಶನ ನಂದ ಸರಸ್ವತಿ ಸ್ವಾಮೀಜಿ, ಡಾ.ಸಾಯಿಗೀತಾ, ಅಜ್ಜಾವರ ಮಹಿಳಾ ಮಂಡಲದ ಅಧ್ಯಕ್ಷೆ ಶಶ್ಮಿ ಭಟ್, ಆಶ್ರಮದ ಟ್ರಸ್ಟಿ ಪ್ರಣವಿ, ನಿವೃತ್ತ ಎಎಸ್ಐ ಕುಶಾಲಪ್ಪ ಗೌಡ ಅತ್ಯಾಡಿ, ಮೇಘಶಾಮ ಅಡ್ಪಂಗಾಯ ಉಪಸ್ಥಿತರಿದ್ದರು.