ನವದೆಹಲಿ: ದೀಪಾವಳಿ ಹಬ್ಬವನ್ನು ಬರ ಮಾಡಿಕೊಳ್ಳಲು ಸಿದ್ಧತೆ ನಡೆಸುತ್ತಿರುವ ದಿಲ್ಲಿ ಜನತೆಗೆ ಶಾಕ್ ಕಾದಿದೆ. ದಿಲ್ಲಿಯಾದ್ಯಂತ ದಟ್ಟ ಹೊಗೆ ಆವರಿಸಿದ್ದು ವಾತಾವರಣ ಪೂರ್ಣವಾಗಿ ಹದಗೆಟ್ಟಿದೆ.
#Delhi's overall #AirQuality dips to the 'very poor' category ahead of #Diwali.
— NDTV (@ndtv) November 3, 2021
(ANI) pic.twitter.com/SN5R5HMvon
ಬುಧವಾರ ಬೆಳಗ್ಗೆ ದಿಲ್ಲಿಯಲ್ಲಿ ಸರಕಾರ ಪಟಾಕಿ ಸಿಡಿಸಬಾರದು ಅನ್ನುವ ನಿಯಮವನ್ನು ತಂದಿದೆ. ಈ ನಡುವೆಯೂ ದಟ್ಟವಾದ ಹೊಗೆ ಕಾಣಿಸಿಕೊಂಡಿರುವುದು ಜನರನ್ನು ಆತಂಕಕ್ಕೆ ದೂಡಿದೆ. ಕಳೆದ ಕೆಲವು ತಿಂಗಳಿನಿಂದ ದಿಲ್ಲಿಯಲ್ಲಿ ಆಗಾಗ್ಗೆ ದಟ್ಟ ಹೊಗೆ ಕಾಣಿಸಿಕೊಳ್ಳುತ್ತಿದೆ. ಪರಿಸರ ಮಾಲಿನ್ಯ ವಿಪರೀತ ಮಟ್ಟಕ್ಕೆ ಹೋಗಿರುವುದೇ ಇದೆಲ್ಲದಕ್ಕೆ ಕಾರಣವಾಗಿದೆ ಎಂದು ಹವಾಮಾನ ಇಲಾಖೆ ವರದಿ ನೀಡಿತ್ತು.