ನವದೆಹಲಿ: ಕೆಲವು ದಿನಗಳ ಹಿಂದೆಯಷ್ಟೇ 20 ವರ್ಷದ ಹುಡುಗಿಯೊಬ್ಬಳು 45 ವರ್ಷದ ಅಂಕಲ್ ಅನ್ನು ಮದುವೆಯಾಗಿದ್ದ ಸುದ್ದಿ ಜಾಲತಾಣದಲ್ಲಿ ಫುಲ್ ವೈರಲ್ ಆಗಿತ್ತು. ಇಲ್ಲೊಂದು ಘಟನೆ ಆ ಸನ್ನಿವೇಶಕ್ಕೆ ತದ್ವಿರುದ್ದವಾಗಿದೆ. ಹೌದು..ಇದು ನಂಬೊದಕ್ಕೆ ಸ್ವಲ್ಪ ಕಷ್ಟದ ವಿಚಾರವಾದರೂ ನಂಬದೆ ಬೇರೆ ದಾರಿಯೇ ಇಲ್ಲ. 13 ವರ್ಷದ ಬಾಲಕ 30 ವರ್ಷದ ಆಂಟಿಯನ್ನು ಕಳೆದ ವರ್ಷ ಮದುವೆಯಾಗಿದ್ದಾನೆ ಎನ್ನುವ ಸುದ್ದಿ ಹಾಗೂ ಫೋಟೋಗಳು ಜಾಲತಾಣದಲ್ಲಿ ವೈರಲ್ ಆಗುತ್ತಿವೆ.
ಜಾಲತಾಣದಲ್ಲಿರುವ ವೈರಲ್ ವಿಚಾರವೇನು?
ಉತ್ತರ ಭಾರತ ಮೂಲದ 13 ವರ್ಷದ ಹುಡುಗನ ತಂದೆ -ತಾಯಿಯ ಆರೋಗ್ಯ ತೀವ್ರವಾಗಿ ಹದಗೆಟ್ಟಿತ್ತು.ತಾವು ಇನ್ನು ಹೆಚ್ಚು ದಿನ ಬದುಕುವುದಿಲ್ಲ ಎಂದು ತಂದೆ-ತಾಯಿಗೆ ಗೊತ್ತಾಯಿತು. ಸಾಯುವುದಕ್ಕೂ ಮೊದಲು ಎಲ್ಲ ಮಕ್ಕಳ ಮದುವೆ ನೋಡಬೇಕು ಅನ್ನುವುದು ಕನಸಾಗಿತ್ತು. ಹಾಗಾಗಿ ತಮ್ಮ ಎಲ್ಲ ಮಕ್ಕಳಿಗೂ ಮದುವೆ ಮಾಡಿದರು. ಈ ಚಿಕ್ಕ ಮಗನಿಗೂ ಮದುವೆ ಮಾಡಬೇಕು ಎಂದು ನಿರ್ಧಾರ ಮಾಡಿದರು. ಆದರೆ 13 ವರ್ಷದ ಹುಡುಗನಿಗೆ ಎಷ್ಟು ಹುಡುಕಾಡಿದರೂ ಅದಕ್ಕಿಂತ ಚಿಕ್ಕ ವಯಸ್ಸಿನ ಹುಡುಗಿ ಸಿಗಲಿಲ್ಲ. ಹೀಗಾಗಿ ಆಂಟಿ ತಾನಾಗಿ ಮದುವೆಗೆ ಮುಂದೆ ಬಂದಿದ್ದಾಳೆ. ನಂತರ ಮದುವೆ ಮಾಡಲಾಗಿದೆ. ಮದುವೆ ದಿನ ಆ ಆoಟಿ ಹುಡುಗನನ್ನು ತಬ್ಕೊಂಡಿದ್ದಾಳೆ. ಈ ಫೋಟೋಗಳು ಈಗ ವೈರಲ್ ಆಗುತ್ತಿದೆ. ಅಚ್ಚರಿಯ ವಿಷಯವೇನೆಂದರೆ ಈಗ ಈ 30 ವರ್ಷದ ಹೆoಗಸು ನನಗೆ ಮಗು ಬೇಕು ಎಂದು ಆ ಹುಡುಗನಿಗೆ ಒಂದು ವರ್ಷದಿಂದ ಕಾಟ ಕೊಡುತ್ತಿದ್ದಾಳೆ ಎನ್ನಲಾಗಿದೆ. ಸದ್ಯ ಇದರ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆ ಆಗುತ್ತಿದ್ದು ಸತ್ಯದ ವಿಚಾರ ಹೊರಬರಲಿ ಮಾತ್ರವಲ್ಲ ಫೋಟೋ ಹಿಂದಿರುವ ಅಸಲಿ ವಿಚಾರ ಹೊರಗೆ ಬರಬೇಕು ಎಂದು ಒತ್ತಾಯಿಸಿದ್ದಾರೆ.