ಬೆಂಗಳೂರು: ವಿಶ್ವದಾದ್ಯಂತ ವಿಶ್ವಕಪ್ ಟಿ20 ಕ್ರಿಕೆಟ್ ಕೂಟದ ರಂಗು ಪಸರಿಸಿದೆ. ವಿವಿಧ ಭಾಷೆಯ ಜನರು ಕ್ರಿಕೆಟ್ ಕುರಿತ ದೈನಂದಿನ ಚರ್ಚೆಗಳಲ್ಲಿ ತೊಡಗಿಕೊಂಡಿದ್ದಾರೆ. ಇಂತಹ ಸಂದರ್ಭದಲ್ಲಿ ಜನಮೆಚ್ಚಿದ ಕೂ ಯ್ಯಾಪ್ ಭಾರತದ ಪ್ರಮುಖ ಬಹು-ಭಾಷೆಯ ಮೈಕ್ರೋ-ಬ್ಲಾಗಿಂಗ್ ವೇದಿಕೆ ಕಲ್ಪಿಸಿದೆ. ಜನರು ತಮ್ಮ ಮಾತೃಭಾಷೆಯಲ್ಲಿ ತಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಸ್ಫೂರ್ತಿ ಮತ್ತು ಅವಕಾಶ ನೀಡಲು ತನ್ನ ಮೊದಲ ಅಭಿಯಾನ ಆರಂಭಿಸಿದೆ. 2021 ರ ಟಿ 20 ವಿಶ್ವಕಪ್ ಪ್ರಾರಂಭದಲ್ಲಿ ಈ ಅಭಿಯಾನವು ಒಗಿಲ್ವಿ ಇಂಡಿಯಾ ಪರಿಕಲ್ಪನೆಯ ಕಿರು-ಸ್ವರೂಪದ 20 ಸೆಕೆಂಡುಗಳ ಜಾಹೀರಾತುಗಳ ಸರಣಿಯನ್ನು ಒಳಗೊಂಡಿದೆ. ಅಬ್ ದಿಲ್ ಮೇ ಜೋ ಭೀ ಹೋ, ಕೂ ಪೆ ಕಹೋ ಏಕೀಕರಣ ಸಂದೇಶದ ಸುತ್ತ ಜಾಹೀರಾತುಗಳನ್ನು ಹೆಣೆಯಲಾಗಿದೆ. ಈ ಅಭಿಯಾನವು ಅಂತರ್ಜಾಲ ಬಳಕೆದಾರರ ಮನಸ್ಸನ್ನು ಡಿಕೋಡ್ ಮಾಡಲು ತೀವ್ರವಾದ ಸಂಶೋಧನೆ ಮತ್ತು ಮಾರುಕಟ್ಟೆ ಮ್ಯಾಪಿಂಗ್ ಅನುಸರಿಸುತ್ತದೆ ಮತ್ತು ಅವರ ಸ್ಥಳೀಯ ಭಾಷೆಯಲ್ಲಿ ವಿಷಯವನ್ನು ಡಿಜಿಟಲ್ ಸಂವಹನ ಮತ್ತು ಹಂಚಿಕೊಳ್ಳುವ ಬಯಕೆಯನ್ನು ಅನುಸರಿಸುತ್ತದೆ. ಜಾಹೀರಾತುಗಳು ಪ್ರಮುಖ ಕ್ರೀಡಾ ಚಾನೆಲ್ ಗಳಲ್ಲಿ ನೇರ ಪ್ರಸಾರವಾಗುತ್ತವೆ ಮತ್ತು ಟಿ 20 ವಿಶ್ವಕಪ್ ಪಂದ್ಯಗಳ ಸಮಯದಲ್ಲಿ ಪ್ರದರ್ಶನಗೊಳ್ಳುತ್ತವೆ.
- +91 73497 60202
- [email protected]
- November 23, 2024 2:18 AM