ಬೆಂಗಳೂರು: ಕಳೆದ ಆಗಸ್ಟ್ನಲ್ಲಿ ಭಾರತದಲ್ಲಿ 20.7 ಲಕ್ಷ ಖಾತೆಗಳನ್ನು ವಾಟ್ಸಾಪ್ ನಿಷೇಧಿಸಿದೆ. ವಾಟ್ಸಾಪ್ ಸೇವೆಗಳ ಬಳಕೆಯಲ್ಲಿನ ತಪ್ಪಾದ ಅನುಸರಣೆಯಿಂದ ವಾಟ್ಸಾಪ್ ಇಂತಹ ಕಠಿಣ ಕ್ರಮವನ್ನು ತೆಗೆದುಕೊಳ್ಳುತ್ತಿದೆ. ಆದ್ದರಿಂದ ನಿಮ್ಮ ವಾಟ್ಸಾಪನ್ನು ಸುರಕ್ಷಿತವಾಗಿರಿಸಲು ಮತ್ತು ಬಳಕೆಗೆ ನೀವು ಕೆಲ ತಪ್ಪುಗಳನ್ನು ಮಾಡಲು ಹೋಗಬೇಡಿ.
ಏನು ಮಾಡಬಾರದು?
ವಾಟ್ಸಾಪ್ ಪ್ಲಸ್ ನಂತಹ WhatsApp ನ ಅನಧಿಕೃತ ಆವೃತ್ತಿಯನ್ನು ಯಾವುದೇ ಕಾರಣಕ್ಕೂ ಬಳಸಬೇಡಿ. ನೀವು ‘ವಾಟ್ಸಾಪ್ ಪ್ಲಸ್‘ ಬಳಸಿದರೆ ವಾಟ್ಸಾಪ್ ನಿಮ್ಮ ಖಾತೆಯನ್ನು ಸ್ಥಗಿತಗೊಳಿಸಬಹುದು. ವಾಟ್ಸಾಪ್ ಪ್ಲಸ್ ಅನ್ನುವುದು ಬಳಕೆದಾರರಿಗೆ ಸ್ಥಿತಿಯನ್ನು ಮರೆಮಾಚುವುದು, ಮಿತಿಗಳಿಲ್ಲದೆ ಫೋಟೋಗಳನ್ನು ಕಳುಹಿಸುವುದು, ವಾಟ್ಸಾಪ್ ಮಿತಿಯನ್ನು ಮೀರಿ ಗುಂಪುಗಳನ್ನು ರಚಿಸುವುದು ಮುಂತಾದ ಹೆಚ್ಚುವರಿ ವೈಶಿಷ್ಟ್ಯಗಳನ್ನು ಅದು ನೀಡುತ್ತೆ. ಆದರೆ ಈ App ಅನಧಿಕೃತ App ಅನ್ನುವುದನ್ನು ಮರೆಯದಿರಿ.
ಬ್ಲಾಕ್ ಆಗಲು ಕಾರಣಗಳೇನು?
ನೀವು ಸ್ವೀಕೃತದಾರರಿಗೆ ಹೆಚ್ಚು ಫಾರ್ವರ್ಡ್ ಮಾಡಿದ ಸಂದೇಶಗಳನ್ನು ಕಳುಹಿಸಿದರೆ ನಿಮ್ಮ ಖಾತೆಯನ್ನು WhatsApp ನಿಂದ ನಿರ್ಬಂಧಿಸಬಹುದು. ಒಂದು ನಿರ್ದಿಷ್ಟ ಅವಧಿಯಲ್ಲಿ ಹಲವಾರು ಜನರು ತಮ್ಮ ಲಿಸ್ಟ್ನಿಂದ ನಿಮ್ಮನ್ನು ಬ್ಲಾಕ್ ಮಾಡಿದರೆ ವಾಟ್ಸಾಪ್ ನಿಮ್ಮ ಖಾತೆಯನ್ನು ಸ್ಥಗಿತಗೊಳಿಸಬಹುದು. ನಿಮ್ಮ ವಾಟ್ಸಾಪ್ ಖಾತೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದರೆ ಆಗ ಈ ರೀತಿ ಮಾಡಿ. ತಕ್ಷಣ ಅನಧಿಕೃತ WhatsApp ಖಾತೆಯನ್ನು ಶಾಶ್ವತವಾಗಿ ಅನ್ ಇನ್ ಸ್ಟಾಲ್ ಮಾಡಿ. ಇಲ್ಲವಾದರೆ ನಿಮ್ಮ ವಾಟ್ಸಾಪ್ ಶಾಶ್ವತವಾಗಿ ಬಂದ್ ಆಗುತ್ತದೆ.