ಸಂಪಾಜೆ: ಕೊರಗಜ್ಜ ಸ್ವಾಮಿಯ ದ್ವಾರ, ಕಾಣಿಕೆ ಹುಂಡಿಯ ಪಕ್ಕದಲ್ಲಿಯೇ ಅನಾಗರಿಕರು ಕಸ ಬಿಸಾಗಿ ಹೋಗಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸಂಪಾಜೆಯ ಕೈಕಪಡ್ಕ ರಸ್ತೆಯ ತಿರುವಿನ ಬಳಿ ನಡೆದಿದೆ. ಮಡಿಕೇರಿ -ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬುಧವಾರ ರಾತ್ರಿ ಮಡಿಕೇರಿ ಕಡೆಗೆ ತೆರಳುತ್ತಿದ್ದ ಕಾರಿನಲ್ಲಿ ಬಂದ, ಕಾಣಲು ವಿದ್ಯಾವಂತರಂತೆ ಇದ್ದ ಪ್ರಯಾಣಿಕರು ಈ ಕೃತ್ಯ ಎಸಗಿ ಹೋಗಿದ್ದಾರೆ. ತಮ್ಮ ಕಾರಿನೊಳಗೆಯೇ ಕುಟುಂಬ ಸಹಿತ ಕುಳಿತು ಊಟ ಮಾಡಿದ್ದು ನಂತರ ನೀರಿನ ಬಾಟಲಿ, ತಿಂಡಿ ಪೊಟ್ಟಣಗಳನ್ನು ಅಲ್ಲಿಯೇ ಬಿಸಾಕಿ ಹೋಗಿದ್ದಾರೆ. ಪಕ್ಕದಲ್ಲಿಯೇ ಕೊರಗಜ್ಜನ ಕಾಣಿಕೆ ಹುಂಡಿ, ಮಹಾದ್ವಾರ ಹಾಗೂ ಮೂರು ಮನೆಗಳೂ ಇವೆ. ಹೆಚ್ಚು ಜನಸಂದಣಿಯ ಪ್ರದೇಶದಲ್ಲಿ ಗಲೀಜು ಮಾಡಿ ಹೋಗಿರುವುದು ಆಕ್ರೋಶಕ್ಕೆ ಕಾರಣವಾಗಿದೆ.
ಒಂದು ಕಡೆ ಪ್ರಧಾನಿ ನರೇಂದ್ರ ಮೋದಿಯವರು ಸ್ವಚ್ಛ ಭಾರತದ ಬಗ್ಗೆ ಮಾತನಾಡುತ್ತಿದ್ದಾರೆ. ಆದರೆ ದೇಶದ ಕೆಲವು ಜನರು ಹೋದಲ್ಲಿ ಬಂದಲ್ಲಿ ಸ್ವಚ್ಛತೆ ಪಾಲಿಸದೆ ಅವಿವೇಕಿಗಳಂತೆ ವರ್ತಿಸುತ್ತಿರುವುದು ವಿಪರ್ಯಾಸವೇ ಸರಿ. ಈ ಬಗ್ಗೆ ನ್ಯೂಸ್ ನಾಟೌಟ್ ತಂಡದ ಜತೆಗೆ ಮಾತನಾಡಿದ ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಜಿ.ಕೆ.ಹಮೀದ್, ‘ರಾತ್ರಿ ಹೊತ್ತಿನಲ್ಲಿ ಪ್ರಯಾಣಿಸುವ ವಾಹನ ಸವಾರರು ನಮ್ಮ ಊರಿನ ಮಾರ್ಗವಾಗಿ ಹೋಗುವ ರಸ್ತೆಯ ಮುಖ್ಯ ಪ್ರದೇಶಗಳಲ್ಲಿ ಗಾಡಿ ನಿಲ್ಲಿಸುತ್ತಾರೆ. ರಸ್ತೆ, ಬಸ್ ಸ್ಟ್ಯಾಂಡ್ ಗಳನ್ನು ಗಲೀಜು ಮಾಡಿ ಹೋಗುತ್ತಿದ್ದಾರೆ. ಪ್ರತಿ ಸಲವೂ ನಾವು ಕ್ಲೀನ್ ಮಾಡುವ ಕೆಲಸವನ್ನು ಪಂಚಾಯತ್ ವತಿಯಿಂದ ಮಾಡುತ್ತೇವೆ. ಊಟ ಮಾಡಿ, ತಿಂಡಿ ತಿನ್ನಿ ಆದರೆ ಅಲ್ಲಲ್ಲಿ ಕಸ ಬಿಸಾಕುವುದು ಸರಿಯಲ್ಲ. ನಿಮ್ಮ ಮನೆಯನ್ನು ಹೇಗೆ ಇಟ್ಟುಕೊಳ್ಳುತ್ತೀರಿ ಹಾಗೆಯೇ ಸುತ್ತಮುತ್ತಲಿನ ಪರಿಸರವನ್ನು ಕಾಪಾಡಿಕೊಳ್ಳಿ. ಪೊಲೀಸರು ಲೈಸನ್ಸ್ ಇಲ್ಲದೆ ಪ್ರಯಾಣಿಸುವವರನ್ನು ಹಿಡಿಯುತ್ತಾರೆ. ಆದರೆ ಹೀಗೆ ಕಸ ಹಾಕುವವರನ್ನು ಏಕೆ ಶಿಕ್ಷೆಗೆ ಗುರಿಪಡಿಸುವುದಿಲ್ಲ? ಕಾನೂನಿನ ಮೂಲಕ ಶಿಕ್ಷೆಯಾದರೆ ವ್ಯವಸ್ಥೆ ಬದಲಾಗುತ್ತದೆ ಎಂದು ತಿಳಿಸಿದ್ದಾರೆ.
ಕಸ ಬಿಸಾಕಿ ಹೋಗಿರುವ ಚಿತ್ರ
ರಾತ್ರಿ ಹೊತ್ತಿನಲ್ಲಿ ಪ್ರಯಾಣಿಸುವ ವಾಹನ ಸವಾರರು ನಮ್ಮ ಊರಿನ ಮಾರ್ಗವಾಗಿ ಹೋಗುವ ರಸ್ತೆಯ ಮುಖ್ಯ ಪ್ರದೇಶಗಳಲ್ಲಿ ಗಾಡಿ ನಿಲ್ಲಿಸುತ್ತಾರೆ. ರಸ್ತೆ, ಬಸ್ ಸ್ಟ್ಯಾಂಡ್ ಗಳನ್ನು ಗಲೀಜು ಮಾಡಿ ಹೋಗುತ್ತಿದ್ದಾರೆ. ಪ್ರತಿ ಸಲವೂ ನಾವು ಕ್ಲೀನ್ ಮಾಡುವ ಕೆಲಸವನ್ನು ಪಂಚಾಯತ್ ವತಿಯಿಂದ ಮಾಡುತ್ತೇವೆ. ಊಟ ಮಾಡಿ, ತಿಂಡಿ ತಿನ್ನಿ ಆದರೆ ಅಲ್ಲಲ್ಲಿ ಕಸ ಬಿಸಾಕುವುದು ಸರಿಯಲ್ಲ. ನಿಮ್ಮ ಮನೆಯನ್ನು ಹೇಗೆ ಇಟ್ಟುಕೊಳ್ಳುತ್ತೀರಿ ಹಾಗೆಯೇ ಸುತ್ತಮುತ್ತಲಿನ ಪರಿಸರವನ್ನು ಕಾಪಾಡಿಕೊಳ್ಳಿ. ಪೊಲೀಸರು ಲೈಸನ್ಸ್ ಇಲ್ಲದೆ ಪ್ರಯಾಣಿಸುವವರನ್ನು ಹಿಡಿಯುತ್ತಾರೆ. ಆದರೆ ಹೀಗೆ ಕಸ ಹಾಕುವವರನ್ನು ಏಕೆ ಶಿಕ್ಷೆಗೆ ಗುರಿಪಡಿಸುವುದಿಲ್ಲ? ಕಾನೂನಿನ ಮೂಲಕ ಶಿಕ್ಷೆಯಾದರೆ ವ್ಯವಸ್ಥೆ ಬದಲಾಗುತ್ತದೆ.
ಜಿ.ಕೆ.ಹಮೀದ್ , ಅಧ್ಯಕ್ಷರು ಗ್ರಾಮ ಪಂಚಾಯತ್ ಸಂಪಾಜೆ