ಲಂಡನ್: ಅನಿಮೇಟೆಡ್ ಗ್ರಾಫಿಕ್ಸ್ ನವೋದ್ಯಮ ಜಿಫಿ (Giphy) ಖರೀದಿ ವಿಚಾರವಾಗಿ ಮಾಹಿತಿ ನೀಡಲು ವಿಫಲವಾಗಿರುವ ಫೇಸ್ ಬುಕ್ ಗೆ ಬ್ರಿಟನ್ ನ ಸ್ಪರ್ಧಾ ಆಯೋಗ 519.76 ರೂ. ದಂಡ ವಿಧಿಸಿದೆ.
ಖರೀದಿ ವ್ಯವಹಾರಕ್ಕೆ ಸಂಬಂಧಿಸಿ ಅಗತ್ಯವಿರುವ ಎಲ್ಲ ಮಾಹಿತಿಯನ್ನು ಒದಗಿಸಲು ಪ್ರಜ್ಞಾಪೂರ್ವಕವಾಗಿ ನಿರಾಕರಿಸಿದ್ದಕ್ಕೆ ಫೇಸ್ಬುಕ್ ಗೆ ಈ ದಂಡ ವಿಧಿಸಲಾಗಿದೆ ಎಂದು ಆಯೋಗ ತಿಳಿಸಿದೆ. ಜಿಫಿ ನವೋದ್ಯಮವನ್ನು ಕಳೆದ ವರ್ಷ ಫೇಸ್ಬುಕ್ ಖರೀದಿಸಿತ್ತು.‘ಮುಖ್ಯವಾದ ಮಾಹಿತಿಯನ್ನು ಒದಗಿಸಲು ನಿರಾಕರಿಸುವುದು ಆದೇಶದ ಉಲ್ಲಂಘನೆ ಎಂದು ಫೇಸ್ಬುಕ್ ಗೆ ಎಚ್ಚರಿಕೆ ನೀಡಿದ್ದೆವು. ಈ ಕುರಿತು ಫೇಸ್ಬುಕ್ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿತ್ತು. ಮನವಿಗೆ ಎರಡು ನ್ಯಾಯಾಲಯಗಳಲ್ಲಿ ಹಿನ್ನಡೆ ಉಂಟಾಗಿತ್ತು. ಆದರೂ ಮಾಹಿತಿ ನೀಡಲು ಕಂಪನಿ ಹಿಂದೇಟು ಹಾಕಿತ್ತು ಎಂದು ಆಯೋಗದ ಹಿರಿಯ ನಿರ್ದೇಶಕ ಜೋಯಲ್ ಬ್ಯಾಮ್ ಫೋರ್ಡ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ತಾನು ಕಾನೂನಿಗಿಂತಲೂ ಮೇಲೆ ಎಂದು ಭಾವಿಸುವ ಯಾವುದೇ ಕಂಪನಿಗೆ ಇದು ಎಚ್ಚರಿಕೆಯ ಗಂಟೆಯಾಗಿರಲಿದೆ’ ಎಂದೂ ಪ್ರಕಟಣೆ ತಿಳಿಸಿದೆ.