ಮಂಗಳೂರು: ನಗರದ ಮರೋಳಿ ಜಯನಗರ ಸುತ್ತಮುತ್ತ ವ್ಯಾಪ್ತಿಯಲ್ಲಿ ಕಂಡು ಬಂದಿದ್ದ ಚಿರತೆಯ ಹುಡುಕಾಟಕ್ಕಾಗಿ ಅರಣ್ಯ ಇಲಾಖೆಯವರು ಶನಿವಾರವೂ ಮತ್ತೊಂದು ಸುತ್ತಿನ ಕಾರ್ಯಾಚರಣೆ ನಡೆಸಿದ್ದಾರೆ. ಆದರೆ ಚಿರತೆಯ ಯಾವುದೇ ಸುಳಿವು ಪತ್ತೆಯಾಗದ ಹಿನ್ನೆಲೆಯಲ್ಲಿ ಸದ್ಯ ಕೂಂಬಿಂಗ್ ಕಾರ್ಯ ಸ್ಥಗಿತ ಮಾಡಲಾಗಿದೆ ಎಂದು ಅರಣ್ಯ ಇಲಾಖಾಧಿಕಾರಿಗಳು ತಿಳಿಸಿದ್ದಾರೆ. ಮರೋಳಿ ಜಯನಗರದ 4ನೇ ಕ್ರಾಸ್ನ ಮನೆಯೊಂದರ ಬಳಿ ಅ.3 ಮತ್ತು ಅ.6ರಂದು ಮರೋಳಿ ಕನಪದವು ಬಳಿ ಚಿರತೆ ಪ್ರತ್ಯಕ್ಷವಾಗಿತ್ತು. ಆದರೆ ಎರಡು ದಿನಗಳಿಂದೀಚೆಗೆ ಚಿರತೆಯ ಯಾವುದೇ ಸುಳಿವು, ಹೆಜ್ಜೆ ಗುರುತು ಪತ್ತೆಯಾಗಿಲ್ಲ. ಆದರೂ ಶನಿವಾರ ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ಸಿಬ್ಬಂದಿ ಜತೆಗೂಡಿ ಮತ್ತೆ ಕೂಂಬಿಂಗ್ ನಡೆಸಿದ್ದಾರೆ. ಮೂರು ದಿನಗಳ ಕಾರ್ಯಾಚರಣೆ ನಡೆದರೂ, ಬೋನಿಗೆ ಸೆರೆಯಾಗದ ಕಾರಣ ಕಾರ್ಯಾಚರಣೆ ಸ್ಥಗಿತ ಘೋಷಿಸಲಾಗಿದೆ ಎಂದು ವಲಯ ಅರಣ್ಯಾಧಿಕಾರಿ ಪ್ರಶಾಂತ್ ಪೈ ತಿಳಿಸಿದ್ದಾರೆ.
- +91 73497 60202
- [email protected]
- November 23, 2024 9:05 PM