ಸುಳ್ಯ: ಚಂದನ ಸಾಹಿತ್ಯ ವೇದಿಕೆ ಸುಳ್ಯ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಸಾಂಸ್ಕೃತಿಕ ಕಲಾ ಸಂಘ ಸುಳ್ಯ ಇದರ ಜಂಟಿ ಆಶ್ರಯದಲ್ಲಿ ನಡೆದ ದಸರಾ ಕವಿಗೋಷ್ಠಿ, ರಾಜ್ಯ ಪ್ರಶಸ್ತಿ ಪ್ರದಾನ, ಗಾಂಧೀ ನಡಿಗೆ , ಪ್ರಮಾಣ ವಚನ ಸ್ವೀಕಾರ , 2 ಸಾಹಿತ್ಯ ಕೃತಿಗಳ ಲೋಕಾರ್ಪಣೆ,ಹಿರಿಯರ ಸಾಹಿತ್ಯ ಕವಿಗೋಷ್ಠಿ ಮತ್ತು ದಸರಾ ಕವಿ ಆಯ್ಕೆ ಕಾರ್ಯಕ್ರಮವು ಸುಳ್ಯದ ಕಾನತ್ತಿಲ ಸಭಾಂಗಣದಲ್ಲಿ ನಡೆಯಿತು. ಖ್ಯಾತ ಚಿತ್ರ ಕಲಾವಿದರಾದ ಬಿ.ಕೆ.ಮಾಧವ ರಾವ್ ಮಂಗಳೂರುರವರು ಸಮಾರಂಭದ ಸರ್ವಾಧ್ಯಕ್ಷತೆ ವಹಿಸಿದ್ದರು. ಸುಳ್ಯ ಕೃಷಿ ಇಲಾಖೆಯ ತಾಂತ್ರಿಕ ಕೃಷಿ ಅಧಿಕಾರಿಗಳಾದ ಮೋಹನ್ ನಂಗಾರು ರವರು ಕಾರ್ಯಕ್ರಮ ಉದ್ಘಾಟಿಸಿದರು. ಕಾಮಧೇನು – ಕಲ್ಪವೃಕ್ಷ ಗ್ರೂಪ್ಸ್ ಮಾಲಕರಾದ ಮಾಧವ ಗೌಡ ಬೆಳ್ಳಾರೆ ಅವರು ಅಧ್ಯಕ್ಷತೆ ವಹಿಸಿದ್ದರು.
ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನದ ಅಧ್ಯಕ್ಷ ಟಿ.ಎಂ.ಶಹೀದ್ ರವರು ಸಾಧಕರನ್ನು ಸನ್ಮಾನಿಸಿ ಗೌರವಿಸಿದರು .ಜೇಸಿಐ ಸುಳ್ಯ ಪಯಸ್ವಿನಿ ಸಂಸ್ಥೆಯ ಅಧ್ಯಕ್ಷ ಗುರುರಾಜ್ ಅಜ್ಜಾವರ, ಪತ್ರಕರ್ತ ಯಶ್ವಿತ್ ಕಾಳಮ್ಮನೆ , ಬಶೀರ್ ಯು ಪಿ ಮತ್ತಿತರರು ಉಪಸ್ಥಿತರಿದ್ದರು. ಚಂದನ ಸಾಹಿತ್ಯ ವೇದಿಕೆಯ ಅಧ್ಯಕ್ಷ ಎಚ್ .ಭೀಮರಾವ್ ವಾಷ್ಠರ್ ರವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಸುಮಂಗಲ ಲಕ್ಷ್ಮಣ ಕೋಳಿವಾಡ ಸ್ವಾಗತಿಸಿದರು. 25 ನೇ ವರ್ಷದ ವಿವಾಹ ವಾರ್ಷಿಕೋತ್ಸವದ ಶ್ರೀ ಪೆರುಮಾಳ್ ಲಕ್ಷ್ಮಣ ಐವರ್ನಾಡು ಮತ್ತು ಸೀನಮ್ಮ (ಶಾಂತಿ) ದಂಪತಿಗಳನ್ನು ಸನ್ಮಾನಿಸಲಾಯಿತು . ಬಳಿಕ ನಡೆದ ಹಿರಿಯರ ಸಾಹಿತ್ಯಗೋಷ್ಠಿಯನ್ನು ಹಿರಿಯ ಸಾಹಿತಿ ನಾರಾಯಣ ರೈ ಕುಕ್ಕುವಳ್ಳಿ ಉದ್ಘಾಟಿಸಿದರು.ಲಾಲ್ ಬಹದ್ದೂರ್ ಶಾಸ್ತ್ರಿ ಸಾಂಸ್ಕೃತಿಕ ಕಲಾ ಸಂಘದ ಗೌರವಾಧ್ಯಕ್ಷರಾದ ಶ್ರೀ ಎಂ.ವೆಂಕಪ್ಪ ಗೌಡ ಅವರು ಅಧ್ಯಕ್ಷತೆ ವಹಿಸಿದ್ದರು.
ಹಿರಿಯ ಸಾಹಿತಿ ಡಾ.ಪ್ರಭಾಕರ ಶಿಶಿಲ ಕೃತಿಗಳ ಕುರಿತು ಮಾತನಾಡಿ ಪ್ರಮಾಣ ವಚನ ಬೋಧಿಸಿದರು. ಹಿರಿಯ ಸಾಹಿತಿ ದಿ|| ಶ್ರೀ ಮಹಾಂತಪ್ಪ ಮೇಟಿ ಅವರ ಸ್ಮರಣಾರ್ಥವಾಗಿ ಹಿರಿಯ ಸಾಹಿತಿ ಶಂಕರ ಕುಲಾಲ್ ಪರ್ಕಳ ಅವರಿಗೆ ಚಂದನ ಸದ್ಭಾವನಾ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಲತಾ ಆಚಾರ್ಯ ಬನಾರಿ ರಚಿಸಿದ ‘ಕಾವ್ಯ ಲತೆ’, ಗೋವಿಂದರಾಜು ಬಿ. ಅವರು ರಚಿಸಿದ ‘ಪ್ರೇಮದ ನಾದ’ ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು. ಬಳಿಕ ನಡೆದ ದಸರಾ ಕವಿಗೋಷ್ಠಿಯನ್ನು ಸತ್ಯಶಾಂತ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷೆ ಶಾಂತಾ ಕುಂಟಿನಿ ಉದ್ಘಾಟಿಸಿದರು. ಹಿರಿಯ ಸಾಹಿತಿ ನರಸಿಂಹ ಉಪಾಧ್ಯಾಯ ಅಧ್ಯಕ್ಷತೆ ವಹಿಸಿದ್ದರು.ತಮಿಳು ಕಲಾವಿದರ ವೇದಿಕೆಯ ಅಧ್ಯಕ್ಷ ಕನ್ನದಾಸನ್ ಎಸ್.ಕುಕ್ಕಂದೂರು, ಸಾಮಾಜಿಕ ಕಾರ್ಯಕರ್ತ ಬಶೀರ್ ಯು.ಪಿ. ಅತಿಥಿಗಳಾಗಿದ್ದರು. ಚಂದನ ಸಾಹಿತ್ಯ ವೇದಿಕೆಯ ಅಧ್ಯಕ್ಷ ಎಚ್.ಭೀಮರಾವ್ ವಾಷ್ಠರ್ ಉಪಸ್ಥಿತರಿದ್ದರು. ದಸರಾ ಕವಿಗೋಷ್ಠಿಯಲ್ಲಿ ಸುಮಾರು 30 ಮಂದಿ ಕವಿಗಳು ಭಾಗವಹಿಸಿ ಸ್ವರಚಿತ ಕವನ ವಾಚಿಸಿಸರು. ಚಂದನ ದಸರಾ ಕವಿಯಾಗಿ ಆಯ್ಕೆಯಾದ ಪರಿಮಳ ಐವರ್ನಾಡು ಅವರಿಗೆ ಚಂದನ ಕುಸುಮ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕಾವ್ಯ ಗಣೇಶ್ ಆಚಾರ್ಯ ಮತ್ತು ಕುಸುಮಾಧರ್ ಬೂಡು ರವರು ಪ್ರಾರ್ಥಿಸಿದರು. ವಿಜಯ್ ಕುಮಾರ್ ಕಾಣಿಚಾರ್ ಮತ್ತು ಪರಿಮಳ ಐವರ್ನಾಡು ರವರು ಸ್ವಾಗತಿಸಿದರು .ರಮೇಶ್ ಮೇದಿನಡ್ಕ ಮತ್ತು ಸುಮಾ ಕಿರಣ್ ಮಣಿಪಾಲ ರವರು ಕಾರ್ಯಕ್ರಮ ನಿರೂಪಿಸಿದರು .