ಬೆಂಗಳೂರು: ಇಂದು ವಿಶ್ವ ಹೃದಯ ದಿನ. ನಮ್ಮ ಹೃದಯವನ್ನು ಕಾಳಜಿ ವಹಿಸಿ ಜೋಪಾನವಾಗಿ ನೋಡಿ ಕೊಳ್ಳಲೆಂದೇ ಇಂದು ಈ ವಿಶೇಷ ದಿನವನ್ನು ಆಚರಿಸಲಾಗುತ್ತಿದೆ. ಹೃದಯ ದಿನದ 24 ಗಂಟೆಯೂ ನಿಯಮಿತವಾಗಿ ಬಡಿದುಕೊಳ್ಳುವುದೇ ಜೀವಂತಿಕೆಯ ಸೆಲೆ. ಅದು ನಿರಂತರ ಬಡಿದುಕೊಳ್ಳುತ್ತಿದ್ದರೆ ನಮ್ಮ ಜೀವನಕ್ಕೆ ಅರ್ಥ ಬರುತ್ತದೆ.
ಇತಿಹಾಸ
1999ರಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಸಹಯೋಗದೊಂದಿಗೆ ವಿಶ್ವ ಹೃದಯ ಒಕ್ಕೂಟವು ಮೊದಲ ಬಾರಿಗೆ ಈ ದಿನವನ್ನು ಘೋಷಿಸಿತು. ಬಳಿಕ 2000ದಲ್ಲಿ ಈ ದಿನವನ್ನು ಸೆಪ್ಟೆಂಬರ್ 24ರಂದು ಆಚರಿಸಲಾಯಿತು. ಆದಾಗ್ಯೂ, 2011ರಿಂದ ವಿಶ್ವ ಹೃದಯ ದಿನವನ್ನು ಪ್ರತೀ ವರ್ಷ ಸೆಪ್ಟೆಂಬರ್ 29ರಂದು ಆಚರಿಸಲಾಗುತ್ತಿದೆ.
ಜಾಗೃತಿ ಮೂಡಿಸುವ ದಿನ
ಈ ದಿನ, ಆರೋಗ್ಯಕ್ಕೆ ಸಂಬಂಧಿಸಿದಂತೆ ಅನಾರೋಗ್ಯಕರ ಆಹಾರ, ತಂಬಾಕು ಸೇವನೆ, ಮತ್ತು ದೈಹಿಕ ದುರ್ಬಲತೆಗೆ ಸಂಬಂಧಿಸದಂತೆ ಉಂಟಾಗವ ಅಪಾಯವನ್ನು ಹೇಗೆ ನಿಯಂತ್ರಿಸಬೇಕು ಎಂಬುದನ್ನು ಸಾರುತ್ತದೆ. ಶೇ. 80ರಷ್ಟು ಅಕಾಲಿಕ ಮರಣಗಳಿಗೆ ಕಾರಣವಾಗುವ ಹೃದಯಾಘಾತ ಮತ್ತು ಪಾರ್ಶ್ವವಾಯುವನ್ನು ತಡೆಗಟ್ಟಲು ಜಾಗೃತಿ ಮೂಡಿಸುವ ದಿನವಾಗಿದೆ.