ಸುಳ್ಯ : ಇತ್ತೀಚೆಗೆ ರಕ್ತ ಚಂದನದ ಮರಗಳನ್ನು ದಾಸ್ತಾನಿರಿಸಿದ್ದ ಶೆಡ್ ವೊಂದಕ್ಕೆ ಚಿಕ್ಕಮಗಳೂರು ವಿಶೇಷ ಅರಣ್ಯ ಸಂಚಾರಿ ದಳದವರು ದಾಳಿ ನಡೆಸಿ 26 ಲಕ್ಷ ರೂ. ಮೌಲ್ಯದ ಮರಗಳನ್ನು ವಶ ಪಡಿಸಿಕೊಂಡು ಇಬ್ಬರನ್ನು ಬಂಧಿಸಿದ ಘಟನೆ ಸುಳ್ಯ ತಾಲೂಕಿನ ಬೆಳ್ಳಾರೆ ಸಮೀಪದ ಬಾಳಿಲ ಗ್ರಾಮದಲ್ಲಿ ನಡೆದಿದೆ.
ಬಾಳಿಲ ಗ್ರಾಮದ ನಿವಾಸಿ ಅಬ್ದುಲ್ಲಾ ಬಿನ್ ಲೇ ಹಸನ್ ಕುಂಞ ರವರ ಶೆಡ್ ನಲ್ಲಿ ಅಕ್ರಮವಾಗಿ ಮಾರಾಟ ಮಾಡುವ ಉದ್ದೇಶದಿಂದ ರಕ್ತ ಚಂದನದ ಮರ ದಾಸ್ತನಿರಿಸಲಾಗಿತ್ತು. ಶೆಡ್ ಮಾಲಿಕ ಅಬ್ದುಲ್ಲಾ ( 51) ಹಾಗೂ ಪುತ್ತೂರು ತಾಲೂಕಿನ ಮಾಡವಿನ ಹಮೀದ್ (47) ಬಂಧಿತ ಆರೋಪಿಗಳಾಗಿದ್ದಾರೆ. ಇವರಿಂದ ಒಟ್ಟು 260 ಕೆ.ಜಿ ತೂಕದ ರಕ್ತ ಚಂದನ ಎಂಬ ಜಾತಿಗೆ ಸೇರಿದ 40 ಮರದ ದಿಮ್ಮಿಗಳನ್ನು ವಶಪಡಿಸಿಕೊಳ್ಳಲಾಗಿದೆ.