ಪುತ್ತೂರು: ಇಲ್ಲಿನ ಜೋಸ್ ಆಲುಕ್ಕಾಸ್ ಚಿನ್ನಾಭರಣದ ಅಂಗಡಿಗೆ ಸೆ.1 ರಂದು ಗ್ರಾಹಕರ ಸೋಗಿನಲ್ಲಿ ಬಂದು ಚಿನ್ನವನ್ನು ಕಳವುಗೈದ ಪ್ರಕರಣಕ್ಕೆ ಸಂಬಂಧಿಸಿ ದಾವಣಗೆರೆ ಮೂಲದ ಮೂವರು ಆರೋಪಿಗಳನ್ನು ಸೆ. 13 ರಂದು ಪುತ್ತೂರು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ದಾವಣಗೆರೆ ನಿವಾಸಿಗಳಾದ ಬೀಬಿಜಾನ್ , ಹುಸೇನ್ ಬಿ , ಜೈತುಂಬಿ ಎಂದು ಗುರುತಿಸಲಾಗಿದೆ.
ಏನಿದು ಘಟನೆ?
ಸೆ.1 ರಂದು ಈ ಘಟನೆ ನಡೆದಿದ್ದು, ಜೋಸ್ ಆಲುಕ್ಕಾಸ್ ಚಿನ್ನದ ಅಂಗಡಿಗೆ 3 ಜನ ಬುರ್ಖಾ ಧರಿಸಿದ ಅಪರಿಚಿತ ಮಹಿಳೆಯರು ಗ್ರಾಹಕರ ಸೋಗಿನಲ್ಲಿ ಬಂದು ಚಿನ್ನದ ಅಂಗಡಿಯ ಬೆಂಡೋಲೆಗಳನ್ನು ಇರಿಸುವ ವಿಭಾಗಕ್ಕೆ ಬಂದು ಸೇಲ್ಸ್ ಮ್ಯಾನ್ ನಲ್ಲಿ ಕಿವಿಯೋಲೆ ತೋರಿಸುವಂತೆ ತಿಳಿಸಿದ್ದರು. ಸೇಲ್ಸ್ ಮ್ಯಾನ್ ಕಿವಿಯ ಚಿನ್ನಾಭರಣಗಳನ್ನು ಟ್ರೇ ಯಲ್ಲಿರಿಸಿ ತೋರಿಸಿದಾಗ 3 ಜನ ಬುರ್ಖಾ ಧರಿಸಿದ ಅಪರಿಚಿತ ಗ್ರಾಹಕರು 1.72 ಗ್ರಾಂ ನ 8,800 ರೂ ಮೌಲ್ಯದ ಚಿನ್ನವನ್ನು ಖರೀದಿಸುವ ಸಮಯ 50.242 ಗ್ರಾಂ ತೂಕದ ಕಿವಿಯ ರಿಂಗ್ 1 ಜೊತೆ ಇದರ ಅಂದಾಜು ಮೌಲ್ಯ 2,60,400 ರ ಬದಲು 3.065 ಗ್ರಾಂ ತೂಕದ 13,400 ರೂ ಮೌಲ್ಯದ ಚಿನ್ನವನ್ನು ಇರಿಸಿ 50.242 ಗ್ರಾಂ ತೂಕದ 2,60,400 ಮೌಲ್ಯದ ಕಿವಿಯ ಚಿನ್ನಾಭರಣವನ್ನು ವಂಚಿಸಿ ಕಳವು ಮಾಡಿಕೊಂಡು ಹೋಗಿದ್ದರು. ಮಾತ್ರವಲ್ಲದೆ ಆರೋಪಿಗಳು ಸುಳ್ಳು ವಿಳಾಸ ಹಾಗೂ ಮೊಬೈಲ್ ಸಂಖ್ಯೆಯನ್ನು ನೀಡಿ ವಂಚನೆ ಮಾಡಿದ್ದರು. ಆರೋಪಿಗಳು ಕಳವು ಕೃತ್ಯ ಸಿಸಿಟಿವಿಯಲ್ಲಿ ದಾಖಲಾಗಿತ್ತು.