ನೆಲ್ಯಾಡಿ: ಗೋಳಿತೊಟ್ಟು -ಕೊಕ್ಕಡ ನಡುವಿನ ಹದಗೆಟ್ಟ ರಸ್ತೆಯನ್ನು ಸರಿಪಡಿಸುವ ವಿಚಾರವಾಗಿ ಸೋಮವಾರ ಪ್ರತಿಕ್ರಿಯಿಸುವುದಾಗಿ ಸಚಿವ ಎಸ್. ಅಂಗಾರ ನ್ಯೂಸ್ ನಾಟೌಟ್ ಗೆ ತಿಳಿಸಿದ್ದಾರೆ. ಈ ಬಗ್ಗೆ ದೂರವಾಣಿಯಲ್ಲಿ ಮಾತನಾಡಿದ ಅವರು, ಜನರ ಸಂಕಷ್ಟಗಳಿಗೆ ತುರ್ತಾಗಿ ಸ್ಪಂದಿಸುವ ಕೆಲಸ ಮಾಡುತ್ತೇನೆ. ಈ ಬಗ್ಗೆ ನನ್ನ ಗಮನಕ್ಕೆ ಯಾವುದೇ ವಿಚಾರ ಬಂದಿರಲಿಲ್ಲ. ಪೂರ್ಣವಾಗಿ ವರದಿ ತರಿಸಿಕೊಂಡು ಸೋಮವಾರ ಪ್ರತಿಕ್ರಿಯಿಸುವುದಾಗಿ ತಿಳಿಸಿದ್ದಾರೆ.
ಶುಕ್ರವಾರ (10-9-2021) ಸಂಜೆ “ಸಚಿವ ಅಂಗಾರರೇ ಕೂಡಲೇ ಗೋಳಿತೊಟ್ಟು- ಕೊಕ್ಕಡ ರಸ್ತೆ ಸರಿಪಡಿಸಿ, ಜನರ ಜೀವ ಉಳಿಸಿ” ಎಂಬ ತಲೆ ಬರಹದಡಿ ನ್ಯೂಸ್ ನಾಟೌಟ್ ನಲ್ಲಿ ವಿಶೇಷ ವರದಿ ಪ್ರಕಟವಾಗಿತ್ತು. ಕೊಕ್ಕಡ ಜಿಲ್ಲಾಸ್ಪತ್ರೆಯನ್ನೇ ನಂಬಿರುವ ಊರಿನ ಸಾವಿರಾರು ಜನ. ಇತಿಹಾಸ ಪ್ರಸಿದ್ಧ ಸೌತಡ್ಕ, ಧರ್ಮಸ್ಥಳ ದೇವಸ್ಥಾನಕ್ಕೆ ತೆರಳುವ ಪ್ರವಾಸಿಗರು ದಿನನಿತ್ಯ ಸಾಗುವ ರಸ್ತೆ ಪೂರ್ಣವಾಗಿ ಹಾಳಾಗಿದೆ. ಮಳೆಗಾಲದಲ್ಲಿ ತಯಾರಿಯಾಗಿರುವ ದೊಡ್ಡ ಹೊಂಡ ಗುಂಡಿಗಳು ವಾಹನ ಸವಾರರ ಜೀವ ತೆಗೆಯಲು ಬಾಯ್ತೆರೆದು ಕಾದು ಕುಳಿತಿವೆ. ಅದನ್ನು ಸರಿಪಡಿಸಿಕೊಡಬೇಕೆಂದು ಊರಿನವರು ಮನವಿ ಮಾಡಿದ್ದರು. ಸಚಿವರ ಉತ್ತರಕ್ಕಾಗಿ ಜನ ಈಗ ಕಾಯುತ್ತಿದ್ದಾರೆ.