ಯಮುನಾ ನಗರ (ಹರಿಯಾಣ): ಒಂಟಿ ಸಲಗವೊಂದು ಕಾಡಿನಿಂದ ರಾಷ್ಟ್ರೀಯ ಹೆದ್ದಾರಿಗೆ ಬಂದು ಎರಡು ಗಂಟೆಗಳಿಗೂ ಅಧಿಕ ಕಾಲ ಮೋಜು ಮಸ್ತಿ ಮಾಡಿದ ಘಟನೆ ಹರಿಯಾಣದ ಯಮುನಾ ನಗರ-ಪಾವೋಂಟಾ ಸಾಹಿಬ್ ಮಾರ್ಗದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಆನೆ ಜಾಲಿಯಾಗಿ ಅಡ್ಡಾಡಿದೆ. ಈ ವೇಳೆ, ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಪ್ರಯಾಣಿಕರು ಗಜರಾಜನ ಚೇಷ್ಟೆ ಕಣ್ತುಂಬಿಕೊಂಡರು. ರಸ್ತೆಯಿಂದ ಆನೆಯನ್ನು ಓಡಿಸುವುದಕ್ಕೆ ಪ್ರಯಾಣಿಕರು ಪ್ರಯತ್ನ ನಡೆಸಿದರೂ ಸಾಧ್ಯವಾಗಲಿಲ್ಲ. ಬಳಿಕ ಅರಣ್ಯ ಇಲಾಖೆ ಸಿಬ್ಬಂದಿ ಬಂದು ಆನೆಯನ್ನು ಓಡಿಸಿದರು. ಯಮುನಾ ನಗರ-ಪಾವೋಂಟಾ ಸಾಹಿಬ್ ಮಾರ್ಗವು ಕಾಲೇಸರ್ ಅರಣ್ಯ ಉದ್ಯಾನದ ಮೂಲಕ ಹಾದು ಹೋಗುತ್ತದೆ. ಕಾಲೇಸರ್ ಅರಣ್ಯ ಉದ್ಯಾನವು ಉತ್ತರಾಖಂಡದ ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನದ ಪಕ್ಕದಲ್ಲಿದೆ. ಸಾಮಾನ್ಯವಾಗಿ ರಾಷ್ಟ್ರೀಯ ಉದ್ಯಾನದ ಕಾಡು ಪ್ರಾಣಿಗಳು ಆಗಾಗ್ಗೆ ಕಾಡುಗಳಿಂದ ರಸ್ತೆಗಳಿಗೆ ಬರುವುದು ಮಾಮೂಲಿಯಾಗಿದೆ.
- +91 73497 60202
- [email protected]
- November 24, 2024 8:16 AM