ನವದೆಹಲಿ: ನಕಲಿ ಕೋವಿಶೀಲ್ಡ್ ಕೋವಿಡ್ ಲಸಿಕೆಗಳು ಚಲಾವಣೆಯಲ್ಲಿವೆ ಎಂಬ ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದ ಬೆನ್ನಲ್ಲೇ, ಕೇಂದ್ರ ಸರ್ಕಾರ ಭಾರತದಲ್ಲೂ ಹೈಅಲರ್ಟ್ ಘೋಷಿಸಿದೆ. ಇಂಥ ನಕಲಿ ಲಸಿಕೆಗಳ ಬಗ್ಗೆ ಎಚ್ಚರ ವಹಿಸುವಂತೆ ರಾಜ್ಯ ಸರ್ಕಾರಗಳಿಗೆ ಸುತ್ತೋಲೆ ರವಾನಿಸಿರುವ ಕೇಂದ್ರ ಸರ್ಕಾರ, ಅಸಲಿ ಮತ್ತು ನಕಲಿ ಬಾಟಲ್ ಗಳನ್ನು ಗುರುತಿಸುವ ಕುರಿತ ಮಾರ್ಗಸೂಚಿಗಳನ್ನು ರಾಜ್ಯಗಳಿಗೆ ಕಳುಹಿಸಿಕೊಟ್ಟಿದೆ.
ಲಸಿಕೆ ಬಾಟಲ್, ಲೇಬಲ್, ಬಣ್ಣ ಮೊದಲಾದ ಮಾಹಿತಿಗಳ ಮೂಲಕ ಹೇಗೆ ಅಸಲಿತನ/ನಕಲಿತನ ಪತ್ತೆ ಹಚ್ಚಬಹುದು ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ. ಸದ್ಯ ಭಾರತದಲ್ಲಿ ಬಳಸಲಾಗುತ್ತಿರುವ ಕೋವಿಶೀಲ್ಡ್ , ಕೋವ್ಯಾಕ್ಸಿನ್ ಮತ್ತು ಸ್ಪುಟ್ನಿಕ್ ಲಸಿಕೆಗಳ ಕುರಿತ ಮಾಹಿತಿಯನ್ನು ಸರ್ಕಾರ ಹಂಚಿಕೊಂಡಿದೆ.
ಅಸಲಿ ಕೋವಿಡ್ ಲಸಿಕೆ ಬಾಟಲ್ ಹೇಗಿರುತ್ತೆ?
1. ಕೋವಿಶೀಲ್ಡ್
– SII (ಸೀರಂ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾ) ಉತ್ಪನ್ನ ಲೇಬಲ್
– ಲೇಬಲ್ ನ ಬಣ್ಣ ಕಡು ಹಸಿರು. ಬಾಟಲ್ನ ಅಲ್ಯುಮಿನಿಯಂ ಫ್ಲಿಪ್ ನ ಬಣ್ಣ ಕಡು ಹಸಿರು.
– ಟ್ರೇಡ್ ಮಾರ್ಕ್ ಜೊತೆಗೆ ಬ್ರ್ಯಾಂಡ್ ಹೆಸರು, ಅಂದರೆ COVISHIELD
– ಲಸಿಕೆಯ ಜನೆರಿಕ್ ಅನ್ನು ಬರೆದಿರುವ ಅಕ್ಷರದ ಫಾಂಟ್ ಬೋಲ್ಡ್ ಆಗಿಲ್ಲ.
– CGS NOT FOR ALL ಎಂದು ಮುದ್ರಿಸಲಾಗಿದೆ.
– Recombinant ಅನ್ನು ಜನೆರಿಕ್ ಹೆಸರಿನ ಕಡೆಯಲ್ಲಿ ಮುದ್ರಿಸಲಾಗಿದೆ.
– ಲೇಬಲ್ ಅಂಟಿಸಿದ ಬದಿಯಲ್ಲಿ ಖಐಐ ಲೋಗೋ ಮುದ್ರಿಸಲಾಗಿದೆ. ಇದನ್ನು ವಿಶಿಷ್ಟಆ್ಯಂಗಲ್ ಮತ್ತು ಸ್ಥಳದಲ್ಲಿ ಮುದ್ರಿಸಿರುವ ಕಾರಣ, ಸೂಕ್ತ ಮಾಹಿತಿ ಇದ್ದವರು ಮಾತ್ರವೇ ಇದನ್ನು ಗುರುತಿಸಬಹುದಾಗಿದೆ.
– ಹೆಚ್ಚು ಸ್ಪಷ್ಟಮತ್ತು ಓದಬಲ್ಲವಂತೆ ಮಾಡಲು ಅಕ್ಷರಗಳನ್ನು ಬಿಳಿಯ ಇಂಕ್ ನಲ್ಲಿ ಮುದ್ರಿಸಲಾಗಿದೆ.
– ಪೂರ್ಣ ಲೇಬಲ್ ಗೆ ವಿಶೇಷವಾದ ಹನಿಕೂಂಬ್ ಎಫೆಕ್ಟ್ ನೀಡಲಾಗಿದ್ದು ಅದನ್ನು ನಿರ್ದಿಷ್ಟಕೋನದಲ್ಲಿ ಮಾತ್ರವೇ ಕಾಣಬಹುದು.
* ಕೋವ್ಯಾಕ್ಸಿನ್
– ಲೇಬಲ್ ಮೇಲೆ ಯುವಿ ಲೈಟ್ ನಲ್ಲಿ ಮಾತ್ರ ನೋಡಬಹುದಾದ ಯುವಿ ಹೆಲಿಕ್ಸ್ (ಡಿಎನ್ಎ ರೀತಿಯ ಸಂರಚನೆ) ಮುದ್ರಿಸಲಾಗಿದೆ.
– ಲೇಬಲ್ ಮೇಲಿನ ಡಾಟ್ಸ್ ಗಳಲ್ಲಿ ಮೈಕ್ರೋ ಟೆಕ್ಟಸ್ ರೂಪದಲ್ಲಿ COVAXIN ಎಂದು ಎಂದು ಮುದ್ರಿಸಲಾಗಿದೆ.
– COVAXIN ಎಕ್ಸ್ನಲ್ಲಿ ಗ್ರೀನ್ ಫಾಯಿಲ್ ಎಫೆಕ್ಟ್
– COVAXIN ಮೇಲೆ ಹಾಲೋಗ್ರಾಫಿಕ್ ಎಫೆಕ್ಟ್
* ಸ್ಪುಟ್ನಿಕ್
ರಷ್ಯಾದಿಂದ ಆಮದು ಮಾಡಿಕೊಳ್ಳಲಾದ ಸ್ಪುಟ್ನಿಕ್ ಲಸಿಕೆ ಇಬ್ಬರು ಉತ್ಪಾದಕರಿಂದ ಬಂದಿದೆ. ಹೀಗಾಗಿ ಎರಡೂ ಬೇರೆ ಬೇರೆ ಲೇಬಲ್ ಹೊಂದಿವೆ. ಆದರೆ ಉಳಿದಂತೆ ವಿನ್ಯಾಸ, ಮಾಹಿತಿ ಒಂದೇ ಇದೇ. ಉತ್ಪಾದಕರ ಹೆಸರು ಮಾತ್ರವೇ ಬೇರೆ ಬೇರೆ ಇದೆ.ಇದುವರೆಗೆ ಆಮದಾದ ಎಲ್ಲಾ ಸ್ಪುಟ್ನಿಕ್ ಉತ್ಪನ್ನಗಳಲ್ಲಿ, ಮುಂಭಾಗ ಮತ್ತು ಹಿಂಭಾಗ ಮಾತ್ರವೇ ಇಂಗ್ಲಿಷ್ ಲೇಬಲ್ ಇದೆ. ಬಾಟಲ್ ನ ಇನ್ನೊಂದು ಬದಿಯ ಪೂರ್ಣ ಮಾಹಿತಿ ರಷ್ಯನ್ ಭಾಷೆಯಲ್ಲಿದೆ.