ಸುಳ್ಯ: ಅಮೃತ ಮಹೋತ್ಸವವನ್ನು ಆಚರಿಸುತ್ತಿದ್ದ ಸಂದರ್ಭದಲ್ಲಿ ವೀರ ವಿನಾಯಕ ಸಾವರ್ಕರ್ ಫೋಟೋ ಹಾಕಿದ್ದ ಮೆರವಣಿಗೆ ತಡೆದು ಎಸ್ ಡಿ ಪಿ ಐ ಸಂಘಟನೆ ದೇಶದ್ರೋಹದ ಕೆಲಸ ಮಾಡಿದೆ ಎಂದು ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಹಿನ್ನೆಲೆ ಎಲ್ಲಾ ಗ್ರಾ.ಪಂ.ವತಿಯಿಂದ ಅಮೃತ ಮಹೋತ್ಸವ ಆಚರಿಸುವುದಕ್ಕೆ ಕೇಂದ್ರ ಸರಕಾರದ ನಿರ್ದೇಶನ ನೀಡಿತ್ತು. ಪುತ್ತೂರು ತಾಲೂಕಿನ ಕಬಕ ಗ್ರಾಮದಲ್ಲಿ ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್ ಸಹಿತ ಇತರೆ ಸ್ವಾತಂತ್ರ್ಯ ಹೋರಾಟಗಾರರ ಪೋಟೋ ಕೂಡ ಹಾಕಿಕೊಂಡು ಮೆರವಣಿಗೆ ನಡೆಸಲಾಗಿತ್ತು. ಆದರೆ ಸಾವರ್ಕರ್ ಪೊಟೋ ಹಾಕಿರುವುದಕ್ಕೆ ಸ್ಥಳೀಯ ಎಸ್ ಡಿಪಿಐಯವರು ಆಕ್ಷೇಪಿಸಿ ಸಾವರ್ಕರ್ ಪೋಟೋವನ್ನು ಹರಿದು ಹಾಕಿದರು. ಟಿಪ್ಪುವಿನ ಪೋಟೊ ಹಾಕಬೇಕು ಎಂದು ಗಲಾಟೆ ಮಾಡಿದ್ದಾರೆ. ಇದು ಎಸ್ ಡಿ.ಪಿ ಐ ಸಂಘಟನೆಯ ಅತಿರೇಕದ ವರ್ತನೆಯಾಗಿದೆ. ಈ ಕೃತ್ಯವನ್ನು ಸರಕಾರ ಗಂಭೀರವಾಗಿ ಪರಿಗಣಿಸಿ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಕಂಜಿಪಿಲಿ ಒತ್ತಾಯಿಸಿದರು.