ಬೆಂಗಳೂರು: ಹೊನ್ನಾಳಿ ಶಾಸಕ ರೇಣುಕಾಚಾರ್ಯ ಸಚಿವ ಸ್ಥಾನ ಸಿಗದಿರುವುದಕ್ಕೆ ತೀವ್ರ ಬೇಸರಗೊಂಡು ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಮುಂದೆ ಕಣ್ಣೀರಿಟ್ಟ ಸನ್ನಿವೇಶ ಬುಧವಾರ ನಡೆಯಿತು. ಕಾವೇರಿ ನಿವಾಸಕ್ಕೆ ಭೇಟಿ ನೀಡಿದ್ದ ವೇಳೆ ರೇಣುಕಾಚಾರ್ಯ ಕಣ್ಣೀರಿಟ್ಟಿದ್ದಾರೆ ಎಂದು ಹೇಳಲಾಗಿದೆ. ಸಚಿವ ಸ್ಥಾನ ಕೈತಪ್ಪುತ್ತಿದ್ದಂತೆ ಬಿಎಸ್ ವೈ ಭೇಟಿ ಮಾಡಿರುವ ರೇಣುಕಾಚಾರ್ಯ ಎರಡು ಗಂಟೆಗೂ ಹೆಚ್ಚು ಹೊತ್ತು ಯಡಿಯೂರಪ್ಪ ಜೊತೆ ಚರ್ಚೆ ನಡೆಸಿದ್ದಾರೆ. ಮಾತುಕತೆ ವೇಳೆ ಭಾವುಕರಾಗಿದ್ದ ರೇಣುಕಾಚಾರ್ಯ ಒಂದು ಹಂತದಲ್ಲಿ ಗದ್ಗತಿಕರಾಗಿ ಕಣ್ಣೀರಿಟ್ಟಿದ್ದಾರೆ. ನಾನು ಪಕ್ಷದ ನಿಷ್ಠಾವಂತನಾಗಿ ಕೆಲಸ ಮಾಡಿದ್ದೇನೆ ಆದರೂ ಸಚಿವ ಸ್ಥಾನ ಕೈತಪ್ಪಿರುವುದು ಯಾಕೆ ? ನಾನು ಮಾಡಿರುವ ತಪ್ಪಾದರೂ ಏನು ? ಪಕ್ಷ ವಿರೋಧಿಗಳ ವಿರುದ್ಧ ಹೋರಾಟ ಮಾಡಿದ್ದೇ ತಪ್ಪಾ ? ಹೀಗೆ ಬಿಎಸ್ ವೈ ಮುಂದೆ ಭಾವುಕರಾಗಿ ರೇಣುಕಾಚಾರ್ಯ ಮಾತನಾಡಿದ್ದಾರೆ. ಈ ವೇಳೆ ಶಾಸಕರನ್ನ ಸಮಾಧಾನಪಡಿಸಲು ಮುಂದಾದ ಬಿಎಸ್ ವೈ…ಎಲ್ಲವೂ ಮುಗಿದೇ ಹೋಯ್ತು ಅಂತಾ ಭಾವಿಸುವುದು ಬೇಡ ಪಕ್ಷದಲ್ಲಿ ಮುಂದೆ ಒಳ್ಳೆಯ ಭವಿಷ್ಯವಿದೆ ಮುಂದೆ ಒಳ್ಳೆಯ ಅವಕಾಶ ಸಿಗಲಿದೆ ಎಂದು ಯಡಿಯೂರಪ್ಪ ಸಮಾಧಾನ ಪಡಿಸಿದ್ದಾರೆ.
- +91 73497 60202
- [email protected]
- November 23, 2024 8:56 AM