ಗುವಾಹಟಿ: ಬೀದಿ ಬದಿಯ ತಿಂಡಿ ಸೇವನೆಯಿಂದ ಆರೋಗ್ಯದ ಮೇಲಾಗುವ ದುಷ್ಪರಿಣಾಮದ ಬಗ್ಗೆ ದಿನನಿತ್ಯ ಸಾಕಷ್ಟು ಚರ್ಚೆಗಳು ನಡೆಯುತ್ತಿರುತ್ತದೆ. ಇದರ ಬೆನ್ನಲ್ಲೇ ಅಸ್ಸಾಂನ ಗುವಾಹಟಿಯಲ್ಲಿ ಪಾನಿಪುರಿ ಅಂಗಡಿಯವನೊಬ್ಬ ಪಾನಿಪುರಿ ಪಾನಿಗೆ ಮೂತ್ರ ಮಿಶ್ರಣ ಮಾಡಿದ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಗುವಾಹಟಿಯ ಅಥಗಾಂವ್ ಪ್ರದೇಶದಲ್ಲಿ ಬೀದಿ ಬದಿ ಪಾನಿಪುರಿ ಅಂಗಡಿ ಇಟ್ಟಿದ್ದ ವ್ಯಕ್ತಿಯೊಬ್ಬ ಮಗ್ ನಲ್ಲಿ ಮೂತ್ರ ವಿಸರ್ಜಿಸಿ, ಅದನ್ನು ನೀರಿಗೆ ಮಿಶ್ರಣ ಮಾಡಿದ್ದಾನೆ. ಸ್ಥಳೀಯ ಸುದ್ದಿ ವರದಿಯ ಪ್ರಕಾರ, ಬೀದಿಯಲ್ಲಿ ಆಹಾರ ಮಾರಾಟ ಮಾಡುತ್ತಿದ್ದ ಗುರುತನ್ನು ಪೊಲೀಸರು ಬಹಿರಂಗಪಡಿಸಿಲ್ಲ. ಪ್ರಸ್ತುತ ಪೊಲೀಸರು ಈ ಕುರಿತಂತೆ ತನಿಖೆ ಕೈಗೊಂಡಿದ್ದಾರೆ.
- +91 73497 60202
- [email protected]
- November 27, 2024 3:55 AM