ಟೋಕಿಯೋ: ದೇಶದ ಫೆಡರೇಷನ್ ಗಳ ನಡುವಿರುವ ಕೆಟ್ಟ ರಾಜಕೀಯ, ಒಳಗೊಳಗೆ ಕಚ್ಚಾಟ, ಅರ್ಹರನ್ನು ಹೊರಗಿಟ್ಟು ಅನರ್ಹರಿಗೆ ಮಣೆ ಹಾಕುವ ವ್ಯವಸ್ಥೆ. ಇಂತಹ ಲೋಪದೋಷಗಳಿಗೆ ಇದೀಗ ಫುಲ್ಸ್ಟಾಪ್ ಬೀಳುವ ಸಮಯ ಸನ್ನಿಹಿತವಾಗಿದೆ. ಕೂಲ್ ನೀರಜ್ ಚೋಪ್ರಾ ಜಾವೆಲಿನ್ ನಲ್ಲಿ ಒಂದು ಪದಕ ಗೆದ್ದರೆ ಬಹುಶಃ ಅದು ಭಾರತದ ಅಥ್ಲೆಟಿಕ್ಸ್ ವಿಭಾಗಕ್ಕೆ ಅದು ಹೊಸ ಶಕೆ ಆಗಿರುತ್ತದೆ. ಬಹು ವರ್ಷಗಳಿಂದ ಕಷ್ಟಪಟ್ಟು, ನಾನಾ ಸಮಸ್ಯೆಗಳನ್ನು ದಿಟ್ಟವಾಗಿ ಎದುರಿಸಿರುವ ನೀರಜ್ ಇಂದು ಫೈನಲ್ ಹಂತದಲ್ಲಿದ್ದಾರೆ. ಒಂದು ಪದಕ ಅವರ ಜೀವನದ ದಾರಿಯನ್ನೇ ಬದಲಾಯಿಸಿ ಬಿಡಬಹುದು. ಅಂತಹ ಸಾಧನೆ ಅವರಿಂದ ಆಗಲಿ ಅನ್ನುವುದು ಕೋಟ್ಯಂತರ ಭಾರತೀಯರ ಹೆಗ್ಗಳಿಕೆಯಾಗಿದೆ.
- +91 73497 60202
- [email protected]
- November 25, 2024 11:58 AM