ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಯುಎಇ ಗೆ ಮೊದಲ ವಿಮಾನವು ಆಗಸ್ಟ್ 18 ರಿಂದ ಆರಂಭವಾಗಲಿದೆ. ನಾಗರಿಕ ವಿಮಾನಯಾನ ಪ್ರಾಧಿಕಾರವು ವಿಮಾನಗಳ ಆರಂಭಕ್ಕೆ ಅನುಮತಿ ನೀಡಿದ ಬೆನ್ನಲ್ಲೇ ಗಲ್ಫ್ ರಾಷ್ಟ್ರಕ್ಕೆ ತೆರಳುವುದಕ್ಕೆ ವಿಮಾನ ಸೇವೆ ಆರಂಭವಾಗುವುದನ್ನೇ ಕಾಯುತ್ತಿದ್ದ ಪ್ರಯಾಣಿಕರಿಗೆ ಸಿಹಿ ಸುದ್ದಿ ಸಿಕ್ಕಿದಂತಾಗಿದೆ. ಕ್ಷಿಪ್ರ ಆರ್ಟಿ ಪಿಸಿಆರ್ ಸೌಲಭ್ಯವನ್ನು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಅಪೊಲೊ ಡಯಾಗ್ನೋಸ್ಟಿಕ್ಸ್ ನ ಸಹಯೋಗದೊಂದಿಗೆ ಆರಂಭಿಸಿದ್ದು, ಇತ್ತೀಚಿನ ಯುಎಇ ಸರ್ಕಾರದ ಆರೋಗ್ಯ ಅಗತ್ಯತೆಗಳ ಪ್ರಕಾರ, ಪ್ರತಿ ಪ್ರಯಾಣಿಕರೂ ವಿಮಾನ ಹತ್ತುವುದಕ್ಕೆ ಆರು ಗಂಟೆಗಳ ಮೊದಲು ವಿಮಾನ ನಿಲ್ದಾಣದಲ್ಲಿ ನೆಗೆಟಿವ್ ಆರ್ಟಿ ಪಿಸಿಟಿ ವರದಿಯನ್ನು ಪಡೆಯಬೇಕು. ವಿಮಾನ ನಿಲ್ದಾಣದಲ್ಲಿ ಕ್ಷಿಪ್ರ ಆರ್ಟಿ ಪಿಸಿಆರ್ ಪರೀಕ್ಷೆಗಳನ್ನು ನಡೆಸಲು ಅಪೊಲೊ ತಜ್ಞ ರೋಗಶಾಸ್ತ್ರಜ್ಞರ ತಂಡ, ಅತ್ಯಾಧುನಿಕ ಉಪಕರಣಗಳು ಮತ್ತು ಕಠಿಣ ಗುಣಮಟ್ಟದ ಪ್ರಕ್ರಿಯೆಗಳನ್ನು ಒದಗಿಸಿದೆ. ಎಲ್ಲಾ ಕೋವಿಡ್ ಎಸ್ಒಪಿ ಪ್ರೋಟೋಕಾಲ್ಗಳನ್ನು ಹೊಂದಿರುವ ಪ್ರಯಾಣಿಕರಿಗೆ ಸುರಕ್ಷಿತ ವಾತಾವರಣದಲ್ಲಿ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಎಲ್ಲಾ ಪ್ರಯಾಣಿಕರನ್ನು ಸಮಯಕ್ಕೆ ಸರಿಯಾಗಿ ಪರೀಕ್ಷಿಸಲು ಪ್ರಯಾಣಿಕರಿಗೆ ವಿಮಾನಕ್ಕೆ ಆರು ಗಂಟೆಗಳ ಮೊದಲು ಪ್ರಯಾಣಿಸಲು ಸೂಚಿಸಲಾಗಿದೆ.
- +91 73497 60202
- [email protected]
- November 26, 2024 6:15 PM