ನವದೆಹಲಿ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಫಿಟ್ನೆಸ್ ಬಗ್ಗೆ ಹೆಚ್ಚು ಯೋಚಿಸುತ್ತಾರೆ. ಸೇವಿಸುವ ಆಹಾರದಿಂದ ಹಿಡಿದು ಕುಡಿಯುವ ನೀರಿನ ತನಕ ಎಲ್ಲವೂ ಫಿಟ್ನೆಸ್ ಕೇಂದ್ರಿತವಾಗಿರುತ್ತದೆ. ಇದರಲ್ಲಿ ಎರಡೂ ಮಾತಿಲ್ಲ. ನಿಯಮಿತವಾಗಿ ವರ್ಕೌಟ್ ಮಾಡುವ ರನ್ ಮಷಿನ್ ಕೊಹ್ಲಿ ವಿಶ್ವದ ಅತ್ಯುತ್ತಮ ಫಿಟ್ನೆಸ್ ಹೊಂದಿರುವ ಕ್ರಿಕೆಟಿಗರಲ್ಲಿ ಒಬ್ಬರಾಗಿದ್ದಾರೆ. ಯಾವಾಗಲೂ ಫಿಟ್ ಆಗಿರಲು ಬಯಸುವ ಅವರು ‘ಬ್ಲ್ಯಾಕ್ ವಾಟರ್’ ಕುಡಿಯುತ್ತಾರಂತೆ. ಇದರ ಬೆಲೆ ಪ್ರತಿ ಲೀಟರ್ಗೆ ಸುಮಾರು 3000-4000 ರೂ. ಆಗುತ್ತದೆ. ಈ ನೀರು ನೈಸರ್ಗಿಕ-ಕಪ್ಪು ಕ್ಷಾರೀಯ ನೀರನ್ನು ಹೊಂದಿರುತ್ತದೆ. ಯಾವಾಗಲೂ ಹೈಡ್ರೇಟ್ ಆಗಿರಲು ಸಹಾಯ ಮಾಡುತ್ತದೆ. ಈ ‘ಬ್ಲ್ಯಾಕ್ ವಾಟರ್’ನಲ್ಲಿ ಪಿಎಚ್ ಪ್ರಮಾಣ ಅಧಿಕವಾಗಿದೆ. ಅದಕ್ಕಾಗಿಯೇ ಇದಕ್ಕೆ ದುಬಾರಿ ಬೆಲೆ ಎಂದು ತಿಳಿದುಬಂದಿದೆ.
ಕೊಹ್ಲಿ ಮಾತ್ರವಲ್ಲದೆ ಬಾಲಿವುಡ್ ನಟಿ ಊರ್ವಶಿ ರೌಟೆಲಾ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಕೋವಿಡ್-19 ಸಾಂಕ್ರಾಮಿಕ ಮತ್ತು ಲಾಕ್ಡೌನ್ ಸಮಯದಲ್ಲಿ ತಮ್ಮ ಪ್ರತಿರಕ್ಷೆಯನ್ನು ಸುಧಾರಿಸಲು ಹಾಗೂ ಫಿಟ್ ಆಗಿರಲು ‘ಬ್ಲ್ಯಾಕ್ ವಾಟರ್’ ಕುಡಿಯುವುದನ್ನು ರೂಢಿಸಿಕೊಂಡಿದ್ದಾರಂತೆ. ಈ ‘ಕಪ್ಪು ನೀರು’ ಚರ್ಮದ ಆರೋಗ್ಯವನ್ನು ಸುಧಾರಿಸುತ್ತದೆ. ತೂಕವನ್ನು ನಿಯಂತ್ರಣದಲ್ಲಿರಿಸುತ್ತದೆ ಮತ್ತು ಖಿನ್ನತೆಯನ್ನು ಕಡಿಮೆ ಮಾಡಲು ಸಹ ಸಹಾಯ ಮಾಡುತ್ತದೆ ಎಂದು ಹೇಳಲಾಗಿದೆ.