ಬೆಂಗಳೂರು: ನೀವು ಮೊಬೈಲ್ ಹೊಂದಿರುವಿರಾ? ಅಪರಿಚಿತರ ಅಂಗಡಿಗಳಲ್ಲಿ ಕರೆನ್ಸಿ ಹಾಕಿಸಿಕೊಳ್ಳುತ್ತಿದ್ದಾರಾ? ಹಾಗಾದರೆ ಈ ಸುದ್ದಿಯನ್ನು ಓದಲೇ ಬೇಕು. ಇತ್ತೀಚೆಗೆ ನೀವು ಮಾಲ್ ಗಳಲ್ಲಿ, ಅಪರಿಚಿತರ ಅಂಗಡಿಗಳಲ್ಲಿ ನಿಮ್ಮ ಮೊಬೈಲ್ ನಂಬರ್ ಕೊಟ್ಟಿರುತ್ತೀರಿ. ಕೆಲವು ದಿನಗಳ ಬಳಿಕ ನಿಮಗೆ ಅಪರಿಚಿತರಿಂದ ಸಂದೇಶ, ಕರೆ ಬರುವುದಕ್ಕೆ ಆರಂಭವಾಗುತ್ತದೆ. ಕಂಪನಿಯವರು ಆಗಿರಬಹುದು ಎಂದು ನೀವು ಯೋಚಿಸುತ್ತಿರಬಹುದು. ಆದರೆ ಇತ್ತೀಚಿನ ದಿನಗಳಲ್ಲಿ ಹುಡುಗಿಯರ ಮೊಬೈಲ್ ಸಂಖ್ಯೆಯನ್ನು ಪಡೆದುಕೊಂಡು ಅವರಿಗೆ ಪ್ರೀತಿ, ಪ್ರೇಮದ ಹೆಸರಿನಲ್ಲಿ ಮಾನಸಿಕ ಕಿರುಕುಳ ನೀಡುವುದು ಹಾಗೂ ಅಶ್ಲೀಲ ಸಂದೇಶ ಕಳಿಸುವಂತಹ ಗುಂಪೊಂದು ಕ್ರೀಯಾಶೀಲವಾಗಿ ಕೆಲಸ ಮಾಡುತ್ತಿದೆ ಎಂದು ವರದಿಯಾಗಿದೆ. ಕರೆನ್ಸಿ ಹಾಕುವ ಸಣ್ಣ ಸಣ್ಣ ಮೊಬೈಲ್ ಸೆಂಟರ್ ಗಳು ಕೂಡ ನಂಬರ್ ಮಾರಾಟಕ್ಕೆ ತೊಡಗಿಕೊಂಡಿವೆಯಂತೆ. ಇದ್ರಲ್ಲಿ ಕೇವಲ ವಸ್ತುಗಳ ಮಾರಾಟದ ಕಾಲ್ ಆದ್ರೆ ತೊಂದರೆ ಇಲ್ಲ. ಆದರೆ ಉತ್ತರ ಪ್ರದೇಶದಲ್ಲಿ ಕೆಲವು ಕಿಡಿಗೇಡಿಗಳು ಹುಡುಗಿಯರ ನಂಬರ್ ಕಲೆಕ್ಟ್ ಮಾಡಿ ಮಾರಾಟಕ್ಕೆ ಇಳಿದಿದ್ದಾರೆ. ನಂಬರ್ ತೆಗೆದುಕೊಂಡವ ಅಶ್ಲೀಲ ಮೆಸೇಜ್ ಕಳಿಸುವುದು,ತೊಂದರೆ ಕೊಡುವುದು ಕಂಡುಬಂದಿದೆಯಂತೆ. ಹೀಗಾಗಿ ಅಪರಿಚಿತರ ಅಂಗಡಿಗಳಲ್ಲಿ ಅಥವಾ ಮಾಲ್ ಗಳಲ್ಲಿ ನಿಮ್ಮ ಮೊಬೈಲ್ ನಂಬರ್ ನೀಡಬೇಡಿ. ತೀರ ಅಗತ್ಯವಿದ್ದಾಗ ಮಾತ್ರ ನೀವು ಸಂಖ್ಯೆ ನೀಡಿ. ಒಂದು ವೇಳೆ ಅಪರಿಚಿತ ಕರೆ ಬಂದಾಗ ಆದಷ್ಟು ದೂರವಿರಿ. ಹೆಚ್ಚು ಕಿರಿಕಿರಿ ಎನಿಸಿದರೆ ಹತ್ತಿರದ ಪೊಲೀಸ್ ಠಾಣೆಗೆ ದೂರು ನೀಡಿ.
ಕುಮಾರ ಸೀಟಿ ತೊಡಿಕಾನ