ಮಂಗಳೂರು: ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ದ.ಕ ಜಿಲ್ಲಾಡಳಿತ ಈ ಬಗ್ಗೆ ಕ್ರಮ ಕೈಗೊಂಡರೂ ಕೊರೊನಾ ಪ್ರಕರಣ ಸಂಖ್ಯೆ ಇಳಿಮುಖವಾಗುತ್ತಿಲ್ಲ. ಸರಕಾರವು ಮೂರನೇ ಅಲೆ ಇರಲಿದೆ ಎಂಬ ಎಚ್ಚರಿಕೆ ಗಂಟೆಯನ್ನು ನೀಡಿತ್ತು. ಈ ಮಧ್ಯೆ ಕೊರೊನಾ ವಿಪರೀತ ಏರಿಕೆ ಕಾಣುತ್ತಿರುವ ಹಿನ್ನಲೇ ಮೂರನೇ ಅಲೆ ಬಂದೆ ಬಿಟ್ಟಿತೆನೋ ಎಂಬ ಆತಂಕ ಮನೆ ಮಾಡಿದೆ. ಇದರ ಮಧ್ಯೆ ಸರಕಾರಕ್ಕೆ ಇನ್ನೊಂದು ಸವಾಲು ಎದುರಾಗಿದೆ. ಕತಾರ್ ನಿಂದ ದ.ಕ ಜಿಲ್ಲೆ ಯ ಕಾರ್ಕಳಕ್ಕೆ ಬಂದಿರುವ ವ್ಯಕ್ತಿಯೊಬ್ಬನಿಗೆ ಇಟಾ ವೈರಸ್ ಪತ್ತೆಯಾಗಿದೆ. ಮಾದರಿಯನ್ನು ಪರೀಕ್ಷೆಗೊಳಪಡಿಸಿ ನಾಲ್ಕು ತಿಂಗಳ ಬಳಿಕ ವಿಷಯ ಬಹಿರಂಗವಾಗಿದೆ.
ಏನಿದು ಇಟಾ ವೈರಾಣು ?
ಈ ಹೊಸ ರೂಪಾಂತರಿ ವೈರಾಣು ಬ್ರಿಟನ್ ಮತ್ತು ನೈಜೀರಿಯಾ ಭಾಗದಲ್ಲಿ ಪತ್ತೆಯಾಗಿತ್ತು. ಬಳಿಕ ಇದು ಭಾರತದ ಮಿಜೋರಾಂ ಸೇರಿದಂತೆ ಕೆಲವೆಡೆ ಕಂಡು ಬಂದಿತ್ತು. ಇದೀಗ ಕತಾರ್ ನಿಂದ ಬಂದಿರುವ ವ್ಯಕ್ತಿಗೂ ಅಲ್ಲಿಂದಲೇ ಸೋಂಕು ತಗುಲಿರುವುದು ದೃಢವಾಗಿದೆ.
ಇಟಾ ವೈರಸ್ ಪತ್ತೆ ಹಚ್ಚಿದ್ದು ಹೇಗೆ?
4 ತಿಂಗಳ ಹಿಂದೆ ಕತಾರ್ ನಿಂದ ಬಂದಿರುವ ವ್ಯಕ್ತಿಯನ್ನು ಮಂಗಳೂರು ಏರ್ ಪೋರ್ಟ್ ನಲ್ಲಿ ಪರೀಕ್ಷಿಸಲಾಗಿತ್ತು. ಈ ವೇಳೆ ಕೊರೊನಾ ಪತ್ತೆಯಾಗಿತ್ತು.ಅವರ ಸ್ಯಾಂಪಲ್ಸ್ ಸಂಗ್ರಹಿಸಿ ಹೆಚ್ಚಿನ ಪರೀಕ್ಷೆಗೆ ಜಿನೊಮಿಕ್ ಅಧ್ಯಯನ ನಡೆಸಲಾಗಿತ್ತು. ಇಟಾ ವೈರಸ್ ಬಗ್ಗೆ ದ.ಕ ಡಿಹೆಓ ಡಾ.ಕಿಶೋರ್ ಕುಮಾರ್ ಸ್ಪೋಟಕ ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ.