ಸುಳ್ಯ: ದ.ಕ ಜಿಲ್ಲೆ ಹಲವು ಗಡಿ ಪ್ರದೇಶಗಳನ್ನು ಹೊಂದಿದ್ದು ಇದು ಕೋವಿಡ್ ನ ಕುರಿತು ಮತ್ತಷ್ಟು ಜಾಗೃತರಾಗಿ ಇರಬೇಕಾದ ಸನ್ನಿವೇಶವನ್ನು ಉಂಟು ಮಾಡಿದೆ. ಹಾಗಾಗಿ ಇಲ್ಲಿನ ಅಧಿಕಾರಿ ವರ್ಗ ಮತ್ತಷ್ಟು ಕಟ್ಟುನಿಟ್ಟಿನ ಕ್ರಮವನ್ನು ಕೈಗೊಂಡು ಕೋವಿಡ್ ಪಾಸಿಟಿವಿಟಿ ದರ ಏರದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಸಚಿವ ಎಸ್ ಅಂಗಾರ ತಿಳಿಸಿದ್ದಾರೆ.
ಕೆವಿಜಿ ಆಯರ್ವೇದ ಕಾಲೇಜಿನಲ್ಲಿ ನೂತನ 100 ಬೆಡ್ಡಿನ ಕೋವಿಡ್ ಕೇರ್ ಸೆಂಟರ್ ಅನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸುಳ್ಯದಲ್ಲಿ ಪಾಸಿಟಿವಿಟಿ ದರ ಕಳೆದ ಒಂದು ವಾರದಲ್ಲಿ ಇಳಿಕೆಯಾಗಿದೆ. ಇದು ಹೀಗೇ ಮುಂದುವರೆದರೆ ಮಾತ್ರ ಸರಕಾರ ಮತ್ತಷ್ಟು ನಿಯಮಗಳನ್ನು ಸಡಿಲಿಕೆ ಮಾಡಲು ಸಾಧ್ಯ ಎಂದರು. ಈ ಸಂದರ್ಭ ಲಿಬರಲ್ ಎಜುಕೇಷನ್ ಆಫ್ ಸುಳ್ಯ ಇದರ ಅಧ್ಯಕ್ಷ ಡಾ. ಕೆ.ವಿ ಚಿದಾನಂದ, ನ.ಪಂ.ಉಪಾಧ್ಯಕ್ಷೆ ಸರೋಜಿನಿ ಪೆಲ್ತಡ್ಕ, ತಹಶಿಲ್ದಾರ್ ಅನಿತಾಲಕ್ಷ್ಮಿ, ನ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಬುದ್ದನಾಯ್ಜ, ಮಾಜಿ ಜಿ.ಪಂ.ಸದಸ್ಯ ಹರೀಶ್ ಕಂಜಿಪಿಲಿ, ರಾಜ್ಯ ರೈತ ಮೋರ್ಚಾ ಉಪಾಧ್ಯಕ್ಷ ಎ.ವಿ.ತೀರ್ಥರಾಮ, ಕೆವಿಜಿ ಆಯರ್ವೇದ ಕಾಲೇಜು ಪ್ರಾಂಶುಪಾಲ ಲೀಲಾಧರ ಕೆ.ವಿ , ವೆಂಕಟ್ ವಳಲಂಬೆ, ನ.ಪಂ.ಸದಸ್ಯರು ಹಾಗೂ ಕಾಲೇಜು ಸಿಬಂದಿ ಉಪಸ್ಥಿತರಿದ್ದರು.