ಕಾಬೂಲ್: ಆಫ್ಘಾನಿಸ್ತಾನದ ಜನರ ಜೀವ ಹಾಗೂ ಜೀವನ ಎರಡೂ ಈಗ ಉಗ್ರರ ಕಪಿಮುಷ್ಠಿಯಲ್ಲಿದೆ. ಇಂದು ಆಫ್ಘಾನಿಸ್ತಾನ ಇಂತಹ ಸ್ಥಿತಿಗೆ ಬರುವುದಕ್ಕೆ ಒಂದರ್ಥದಲ್ಲಿ ಅಮೆರಿಕವೇ ಪರೋಕ್ಷವಾಗಿ ಕಾರಣವಾಯಿತೇ? ಅನ್ನುವ ಚರ್ಚೆಗಳು ಶುರುವಾಗಿದೆ. ತಾಲಿಬಾನ್ ಅನ್ನು ದೇಶದಿಂದ ಹೊಡೆದೋಡಿಸಿ ಕಳೆದ 20 ವರ್ಷಗಳಿಂದ ಅಲ್ಲಿಯೇ ನೆಲೆಗೊಂಡಿದ್ದ ಅಮೆರಿಕ ಹಾಗೂ ನ್ಯಾಟೊ ಪಡೆಗಳು ಹಿಂದಕ್ಕೆ ಮರಳುವ ಪ್ರಕ್ರಿಯೆಗೆ ಚಾಲನೆ ದೊರೆತಿತ್ತ. ಅದರ ಅಂಗವಾಗಿ ಅಮೆರಿಕ ಸಾವಿರಾರು ಸೈನಿಕರನ್ನು ಹಿಂದಕ್ಕೆ ಕರೆಸಿಕೊಂಡಿತು. ತಾನು ಅಧಿಕಾರವನ್ನು ಆಫ್ಘನ್ ಸೇನೆಯ ಕೈಗೆ ಹಸ್ತಾಂತರಿಸಿ ಪರಿಸ್ಥಿತಿ ಕೈಮೀರದಂತೆ ಸಹಾಯ ಮಾಡಿಯೇ ದೇಶ ತೊರೆಯುವುದಾಗಿ ಅಮೆರಿಕ ವಾಗ್ದಾನ ನೀಡಿತ್ತು. ಆದರೆ ಆದದ್ದೇ ಬೇರೆ. ತಾಲಿಬಾನಿಗಳು ದೇಶವನ್ನು ನುಂಗುವುದನ್ನು ಕೈಕಟ್ಟಿಕೊಂಡು ನೋಡಿತು. ಆಫ್ಘನ್ ಪಡೆಗಳು ತಾಲಿಬಾನಿಗಳ ವಿರುದ್ಧ ಹೋರಾಟ ನಡೆಸುವ ಸಮಯದಲ್ಲಿ ತಾನು ನೆರವಿಗೆ ಧಾವಿಸುವುದಾಗಿ ಹೇಳಿದ್ದರೂ ಅದೇಕೋ ಪೂರ್ಣ ಪ್ರಮಾಣದಲ್ಲಿ ಸಹಾಯವನ್ನು ಚಾಚಲಿಲ್ಲ. ಅದಕ್ಕೇ ಅಂತಾರಾಷ್ಟ್ರೀಯ ಸಮುದಾಯ ಅಮೆರಿಕವನ್ನು ದೂಷಿಸುತ್ತಿದೆ.
- +91 73497 60202
- [email protected]
- November 5, 2024 7:24 PM