ಟೋಕಿಯೋ: ಸಾಧನೆಗೆ ಬೇಕಾಗಿರುವುದು ವಯಸ್ಸಲ್ಲ ಛಲ ಅನ್ನುವುದನ್ನು ಇಲ್ಲೊಬ್ಬರು ಅಂಕಲ್ ತೋರಿಸಿಕೊಟ್ಟಿದ್ದಾರೆ. ತಮ್ಮ 57ನೇ ವಯಸ್ಸಿನಲ್ಲಿ ಒಲಿಂಪಿಕ್ಸ್ ಕಂಚಿನ ಪದಕ ಗೆದ್ದು ಸುದ್ದಿಯಾಗಿದ್ದಾರೆ.
ಯಾರಿವರು ಅಂಕಲ್?
ಹೆಸರು ಅಲ್ ರಷಿದಿ. ಕುವೈಟ್ ದೇಶದವರು. ಪುರುಷರ ವಿಭಾಗದ ಸ್ಕೀಟ್ ಶೂಟಿಂಗ್ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ಯುವಕರು ನಾಚುವಂತೆ ಪ್ರದರ್ಶನ ನೀಡಿದರು. ನೋಡ ನೋಡುತ್ತಲೇ ಟೋಕಿಯೋ ಒಲಿಂಪಿಕ್ಸ್ ನಲ್ಲಿ ಕಂಚಿನ ಪದಕವನ್ನು ಗೆದ್ದೇ ಬಿಟ್ಟರು. ರಷಿದಿ ಕ್ರೀಡಾ ಜೀವನದಲ್ಲಿ ಏಳು ಸಲ ಒಲಿಂಪಿಕ್ಸ್ ನಲ್ಲಿ ಪಾಲ್ಗೊಂಡಿದ್ದಾರೆ. ಇದು ಅವರ ಎರಡನೇ ಒಲಿಂಪಿಕ್ಸ್ ಕಂಚಿನ ಪದಕವಾಗಿದೆ ಅನ್ನೋದು ವಿಶೇಷ.
ಏಜ್ ಈಸ್ ಜಸ್ಟ್ ನಂಬರ್
ರಷಿದಿ ಪದಕ ಗೆಲ್ಲುತ್ತಿದ್ದಂತೆ ಹಲವಾರು ಮಂದಿ ಹರ್ಷ ವ್ಯಕ್ತಪಡಿಸಿದ್ದಾರೆ. ಅಂತಹವರಲ್ಲಿ ಭಾರತದ ಖ್ಯಾತ ಶೂಟರ್ ಲಂಡನ್ ಒಲಿಂಪಿಕ್ಸ್ ಕಂಚಿನ ಪದಕ ವಿಜೇತ ಗಗನ್ ನಾರಂಗ್ ಕೂಡ ಒಬ್ಬರು. ಅವರು ಹೇಳಿದ್ದು ಹೀಗೆ, ಐವತ್ತೇಳು ವರ್ಷಕ್ಕೆ ರಷಿದಿಗೆ ಒಲಿಂಪಿಕ್ಸ್ ಪದಕ, ಇವರಿಂದ ಕಲಿಯಿರಿ. ಏಜ್ ಅನ್ನೋದು ಜಸ್ಟ್ ನಂಬರ್ ಮಾತ್ರ ಅನ್ನೋದನ್ನ ಎಂದು ತಿಳಿಸಿದರು.
- +91 73497 60202
- [email protected]
- November 5, 2024 6:00 PM