*ರಾಘವೇಂದ್ರ ಪ್ರಭು
ಕರ್ನಾಟಕದ ಮಾಜಿ ಮುಖ್ಯಮಂತ್ರಿ ಸೋಮಪ್ಪ ರಾಯಪ್ಪ ಬೊಮ್ಮಾಯಿ ಸುಪುತ್ರ ಬಸವರಾಜ್ ಬೊಮ್ಮಾಯಿ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ತಂದೆ-ಮಗನಿಗೆ ರಾಜ್ಯದ ಚುಕ್ಕಾಣಿ ಹಿಡಿಯುವುದಕ್ಕೆ ಒಲಿದಿರುವ 2ನೇ ಭಾಗ್ಯವಿದು.. ಮೊದಲನೆಯದು ದೇವೇಗೌಡ ಕುಮಾರಸ್ವಾಮಿ ಶ್ರೀಯುತರು ಹಾವೇರಿ ಜಿಲ್ಲೆಯ ಶಿಗ್ಗಾನ್ ವಿಧಾನಸಭೆ ಕ್ಷೇತ್ರದ ಶಾಸಕರಾಗಿರುವ ಬೊಮ್ಮಾಯಿ ಹಿಂದಿನ ಸಕಾ೯ರದಲ್ಲಿ ಗೃಹ ಹಾಗೂ ಸಂಸದೀಯ ವ್ಯವಹಾರಗಳ ಖಾತೆ ಸಚಿವರಾಗಿದ್ದರು. ಅವರು ಉಡುಪಿ ಜಿಲ್ಲೆಯ ಉಸ್ತುವಾರಿಯಾಗಿದ್ದರು ಎಂದು ಹೇಳಲು ನಮಗೆ ಹೆಮ್ಮೆ.
ಜನತಾ ಪರಿವಾರದ ಕಿಡಿ
ಬಸವರಾಜ ಬೊಮ್ಮಾಯಿ ಮೂಲತಃ ಜನತಾ ಪರಿವಾರದ ಹಿನ್ನೆಲೆ ಹೊಂದಿದವರು. ತಂದೆ ಎಸ್.ಆರ್.ಬೊಮ್ಮಾಯಿ ಜನತಾ ಪಕ್ಷದ ಪ್ರಭಲ ಮುಖಂಡರಾಗಿ ಮುಖ್ಯಮಂತ್ರಿಯಾಗಿ ಕೆಲಸ ಮಾಡಿದವರು. ತಂದೆ ಕಾಲದಲ್ಲಿ ಬಸವರಾಜ ಬೊಮ್ಮಾಯಿಯವರು ಸಕ್ರೀಯ ರಾಜಕಾರಣದಲ್ಲಿ ಇಲ್ಲವಾದರೂ ತಂದೆಯ ರಾಜಕೀಯ ಪಯಣಕ್ಕೆ ಸಾಥ್ ನೀಡಿದವರು. ತಂದೆಯಿಂದ ರಾಜಕೀಯ ಪಟ್ಟುವನ್ನು ಕಲಿತವರು.ಜನತಾ ಪರಿವಾರದಿಂದ ಬಂದರೂ ಬಿಜೆಪಿಯಲ್ಲಿ ಮುಖ್ಯಮಂತ್ರಿಯಾದದ್ದು ವಿಶೇಷ.
ಎಂಜಿನೀಯರಿಂಗ್ ಆಗಿದ್ದ ಬೊಮ್ಮಾಯಿ
1998 ಹಾಗೂ 2004ರಲ್ಲಿ ಬೊಮ್ಮಾಯಿ ಎರಡು ಅವಧಿಗೆ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ ಗೆ ಆಯ್ಕೆ ಆಗಿದ್ದರು. ಜನತಾ ದಳದ ಮೂಲಕ ರಾಜಕೀಯ ಆರಂಭಿಸಿದ್ದ ಅವರು 1999 ರಲ್ಲಿ ಜನತಾ ದಳ ವಿಭಜನೆ ಆದಾಗ ಸಂಯುಕ್ತ ಜನತಾ ದಳವನ್ನು ಆಯ್ಕೆ ಮಾಡಿ ರಾಜಕೀಯ ಜೀವನ ಮುಂದುವರಿಸಿದ್ದರು. ಬಳಿಕ ಅವರು 2008ರಲ್ಲಿ ಬಿಜೆಪಿ ಸೇರಿ ಹಾವೇರಿ ಜಿಲ್ಲೆಯ ಶಿಗ್ಗಾನ್ ನಿಂದ ಶಾಶಕರಾಗಿ ಆಯ್ಕೆಯಾಗಿ 2008 ರಲ್ಲಿ ಬೃಹತ್ ನೀರಾವರಿ ಸಚಿವರಾಗಿ ಕರ್ತವ್ಯ ನಿರ್ವಹಿಸಿದ್ದ ಬಸವರಾಜ ಬೊಮ್ಮಾಯಿ ಎಂಜಿನಿಯರಿಂಗ್ ಪದವೀದರರು ಕೂಡ ಹೌದು ಕ್ಲೀನ್ ಇಮೇಜ್, ಪಕ್ಷನಿಷ್ಠೆ, ಕಾಯ೯ದ ಕ್ಷತೆ ಅವರಿಗೆ ಈ ಸ್ಥಾನದವರೆಗೆ ಕರೆದುಕೊಂಡು ಬಂದಿದೆ.
ಸವಾಲುಗಳನ್ನು ಸಮಥ೯ವಾಗಿ ಎದುರಿಸಲಿ
ರಾಜ್ಯದಲ್ಲಿರುವ ಕರೋನಾ ಪರಿಸ್ಥಿತಿ, ಉತ್ತರ ಕನಾ೯ಟಕದಲ್ಲಿ ಉoಟಾಗಿರುವ ಪ್ರವಾಹ ಪರಿಸ್ಥಿತಿ, ಆಥಿ೯ಕ ಸ್ಥಿತಿ ,ಬಜೆಟ್ ಕಾಯ೯ಗತ ಮುಂತಾದ ಹಲವಾರು ಸವಾಲುಗಳು ಮುಂದಿವೆ ಅದನ್ನು ಸಮಥ೯ವಾಗಿ ಎದುರಿಸಿ ಯೋಜನೆಗಳನ್ನು ಕಾಯ೯ ಗತ ಮಾಡಬೇಕಾಗಿದೆ
ಉಡುಪಿ ಜಿಲ್ಲೆಯ ನಿರೀಕ್ಷೆ
ನಮ್ಮ ಜಿಲ್ಲೆಯ ಬಗ್ಗೆ ಅವರಿಗೆ ಎಲ್ಲಾ ರೀತಿಯ ಮಾಹಿತಿ ಇದೆ.ಮುಖ್ಯವಾಗಿ ಸಕಾ೯ರಿ ಮೆಡಿಕಲ್ ಕಾಲೇಜು ಸ್ಥಾಪನೆ, ಜಿಲ್ಲಾಸ್ಪತ್ರೆಯ ಮೇಲ್ದಜೆ೯ ಕಾಮಗಾರಿ, ವಾರಾಹಿ ಯೋಜನೆ ಅನುಷ್ಟಾನ, ಮಲ್ಪೆ – ಆ ಗುಂಬೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ (ಪಕ೯ಳ ರಸ್ತೆ ಸೇರಿ), ಐಟಿ ಪಾಕ್ ೯ ಸ್ಥಾಪನೆ ಸೇರಿದಂತೆ ಅನೇಕ ಅಭಿವೃದ್ಧಿ ಕಾಮಗಾರಿಗಳು ನಡೆಯಬೇಕಾಗಿದೆ. ಉಳಿದಿರುವ 2 ವಷ೯ದಲ್ಲಿ ಈ ಕೆಲಸಗಳು ನಡೆಯಲಿ. ಒಟ್ಟಾಗಿ ಅವರನ್ನು ಅಭಿನಂದಿಸುತ್ತಾ, ಮುಂದಿನ ದಿನಗಳಲ್ಲಿ ಉತ್ತಮ ಆಡಳಿತ ನೀಡಲಿ’ ಜನರ ನಿರೀಕ್ಷೆ ಹುಸಿ ಮಾಡದೆ ಮುಂದುವರೆಯಲಿ.