ಸುಳ್ಯ: ಆರ್ಥಿಕವಾಗಿ ಹಿಂದುಳಿದಿರುವ ದಲಿತ ಮಹಿಳೆಯೊಬ್ಬರ ಸ್ವಾಧೀನದಲ್ಲಿದ್ದ ಜಾಗಕ್ಕೆ ಅರಂತೋಡು ಗ್ರಾಮ ಪಂಚಾಯತ್ ಆಡಳಿತ ವರ್ಗ ಬೇಲಿ ಹಾಕಿರುವ ಅಮಾನವೀಯ ಘಟನೆ ನಡೆದಿದೆ.
ಏನಿದು ಘಟನೆ?
ಸುಳ್ಯ ತಾಲೂಕಿನ ಅರಂತೋಡು ಗ್ರಾಮದ ಬಿಳಿಯಾರಿನ ದಲಿತ ಮಹಿಳೆ ಕಮಲ ಎಂಬುವವರು ಸರ್ವೇ ನಂಬರ್ 207/1A ಈ ಜಾಗದಲ್ಲಿ ಸುಮಾರು 40 ವರ್ಷಗಳಿಂದ ವಾಸವಾಗಿದ್ದರು ಹಾಗೂ ಜಾಗದಲ್ಲಿ ಕೃಷಿ ಕೂಡ ಮಾಡಿದ್ದರು. ಈಗ ಈ ಜಾಗವನ್ನು ಹಠಾತ್ ಆಗಿ ಅರಂತೋಡು ಗ್ರಾಮ ಪಂಚಾಯಿತಿ ನವರು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ. ಇದರಿಂದ ನೊಂದಿರುವ ಮಹಿಳೆ ನಮ್ಮ ಜಮೀನನ್ನು ನಮಗೆ ವಾಪಸ್ ಕೊಡಿಸಿ ಎಂದು ಅಂಬೇಡ್ಕರ್ ರಕ್ಷಣಾ ವೇದಿಕೆಗೆ ದೂರನ್ನು ನೀಡಿದ್ದಾರೆ. ಈ ದೂರನ್ನು ಸ್ವೀಕರಿಸಿರುವ ಸಂಘಟನೆಯ ಜಿಲ್ಲಾಧ್ಯಕ್ಷ ಪಿ.ಸುಂದರ ಪಾಟಾಜೆಯವರು ಸಹಾಯಕ ಆಯುಕ್ತರು ಪುತ್ತೂರು ವಿಭಾಗ ಅವರಿಗೆ ಪತ್ರ ಮೂಲಕ ದೂರು ನೀಡಿದ್ದಾರೆ. ಜಿಲ್ಲಾ ಸಂಯೋಜಕ ಮಂಜುನಾಥ ಶಾಂತಿಮೂಲೆ ಮತ್ತು ಕಮಲ ಉಪಸ್ಥಿತರಿದ್ದರು.